ಇಳಿ, ಇೞಿ

ಇಳಿ, ಇೞಿ

ಬರಹ

ಇಳಿ=ಸೊರಗು, ಕಡಿಮೆಯಾಗು, ಇಳಿದೆಂದು ಕ್ಷೀಣಂ (ಶಬ್ದಮಣಿದರ್ಪಣ)
ಉದಾಹರಣೆ:- ಅವನೆಷ್ಟು ಇಳಿದು ಹೋಗಿದ್ದಾನೆ.

ಜನ್ನನ ಯಶೋಧರಚರಿತೆಯ ಉದಾಹರಣೆ

ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ||

ಅಮೃತಮತಿಗೆ ಆಸ್ಥಾನದ ಮಾವಟಿಗನ ಮೇಲೆ ಮನಸ್ಸಾದ ಮೇಲೆ ರಾಜನಾದ ತನ್ನ ಗಂಡನ ಮೇಲೆ ಪ್ರೀತಿ ಕಡಿಮೆಯಾಯ್ತೆಂದು ಹೇೞುವ ಪದ್ಯದ ಭಾಗವಿದು.

ಇೞಿ=ಕೆೞಗಿೞಿ (ಇೞಿ ನಿಮ್ನಾವತರಣೇ ಶಬ್ದಮಣಿದರ್ಪಣ)
ಭಾವನಾಮ ಇೞಿತ, ಇೞಿಕೆ
ಗಗಸ್ಥಳದಿಂದುಡುಗಳ್ ಪೞಪೞನುದುರ್ವವೋಲೆಡೆವಿಡದಿೞಿವ ಆಲಿವರಲ ಮೞೆ.
ಉದಾಹರಣೆಗೆ: ಮೞೆಯ ಇೞಿತ ಇಳಿದು ಹೋಯ್ತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet