ಇವರೇಕೆ ಹೀಗೆ ??

ಇವರೇಕೆ ಹೀಗೆ ??

ಕವನ

ಬಿಟ್ಟರೆ ಇವರನ್ನು ಅವರ‌ ಅವರ‌ ಪಾಡಿಗೆ


ಇವರ‌ ಮನಸ್ಸು , ಮಾತು ಬೆಣ್ಣೆಯ‌ ಗಡಿಗೆ


ಕೇಳಿ ಇವರನ್ನು ಯಾಕೆ , ಯಾರ ಜೊತೆ ,ಎಲ್ಲಿಗೆ


ಮತ್ತು ಒಪ್ಪದೆ ನೊಡಿ , ಅವ್ರ‌ ಇಷ್ಟ‌  , ಬೇಡಿಕೆಗಳಿಗೆ


ಆಗ‌ ಮುಖಗಳಾಗುವವು ಕಾರದ‌ ಸ೦ಡಿಗೆ .


ಎಷ್ಟೇಳಿದರು ಸ್ವಲ್ಪ‌ ಕೂಡ‌ ತಲುಪುವುದಿಲ್ಲ‌ ಇವರ‌ ಮ೦ಡೆಗೆ


ಹೀಗಿರುವಾಗ‌ ಬುದ್ದಿ ಹೇಳಿ ವ್ಯರ್ತಮಾಡುವುದೇಕೆ ನಮ್ಮ‌ ಗಳಿಗೆ,


ಮುನಿಸಿಕೊಳ್ಳಬೇಡಿ ಇ೦ಥವರ‌ ಕೋಪ‌ ತಾಪಗಳಿಗೆ


ಇ೦ತಿದ್ದು ನೋಡಿ ಸ೦ಭ೦ದ‌ ರುಚಿಯಾದ‌ ಹೋಳಿಗೆ :) 


ಆದರೂ ‍____ ಇವರೇಕೆ ಹೀಗೆ????????????

Comments

Submitted by venkatb83 Sun, 12/02/2012 - 17:57

ಮಕ್ಕಳಲ್ವೇ ಅದ್ಕೆ ಹಾಗೆ....!! ಸಖತ್ ಸರಳ ಮುದ್ದಾದ ಕವನ.. ಹಿದಿಸಿತು..
ನಮ್ಮ ಮಾತಾ ಪಿತರು ಅಜ್ಜ ಅಜ್ಜಿ ಏನಾರ್ ಹೇಳಿದ್ದಾಗ ಮುಖ ಹೈದರಾಬಾದ್ ಹಪ್ಪಳ ಮಾಡಿಕೊಂಡದ್ದು ನೆನಪಿಗೆ ಬಂತು...

ಶುಭವಾಗಲಿ.

\|

Submitted by ಮಮತಾ ಕಾಪು Mon, 12/03/2012 - 10:09

In reply to by venkatb83

ಮಕ್ಕಳು ತುಂಟತನದಿಂದ ಕೂಡಿದ್ದರೇನೆ ಚೆನ್ನ. ಮಕ್ಕಳ ಕವನ ತುಂಬಾ ಚೆನ್ನಾಗಿತ್ತು, ಮರಳಿ ಬರಲಾರವೇ ಆ ಬಾಲ್ಯ ದಿನಗಳು? ಮಕ್ಕಳು ಹಾಗೆಯೇ ವಿನುತಾ ಅವರೆ. ಅಭಿನಂದನೆಗಳು.