ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಈಗ ಕನ್ನಡ ಬರೆಯಿರಿ ಯಾವುದೇ ವೆಬ್ ಸೈಟ್ನಲ್ಲಿ... ಇಚ್ಛೆ ಬಂದಲ್ಲಿ..

ಬರಹ

ಸ್ನೇಹಿತರೆ,

ಎಲ್ಲಾ ಕನ್ನಡಿಗರಿಗೆ...ವಿಶೇಷ ಸುದ್ದಿ..

ಇನ್ನೂ ಕನ್ನಡದಲ್ಲಿ ಪ್ರತಿಕ್ರಿಯಿಸುವುದು, ಲೇಖನ ಬರೆಯುವುದು, ವ್ಯಾಕರಣದ (spelling ವಿಚಾರದಲ್ಲಿ) ತಪ್ಪನ್ನು ಕಡಿಮೆ ಮಾಡಿಕೊಂಡು ಬರೆಯುವುದು, ಇನ್ನೂ ಬಾಳೆಹಣ್ಣು ಸುಲಿದಷ್ಟೇ ಸುಲಭ..

ಈ ಕೆಳಗಿನ ಲಿಂಕ್ ಗಮನಿಸಿ.. ಪೂರ್ಣ, ಸಂಪೂರ್ಣ ವಿವರವಾದ ಲೇಖನ ಇಲ್ಲಿದೆ..

http://t13n.googlecode.com/svn/trunk/blet/docs/help_kn.html

ಇದನ್ನ ವಿವರವಾಗಿ ಗಮನಿಸಿದ ನನಗೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿ ಅನಿಸಿತು..
ಆಫೀಸ್ನಲ್ಲಿ ಹಾರಿ ಹಾರಿ ಕುಣಿಯೋದೊಂದೇ ಬಾಕಿ ಇದ್ದದ್ದು.
ಯಾವುದೇ.. ವೆಬ್ ಸೈಟ್ ಇರಬಹುದು.. ಎಲ್ಲೇ ಇರಬಹುದು, ನೀವು ಈ ಕನ್ನಡ ಲಿಪ್ಯಂತರ ಉಪಯೋಗಿಸಬಹುದು..

javascript:(t13nb=window.t13nb||function(l){var%20t=t13nb,d=document,o=d.body,c="createElement",a="appendChild",w="clientWidth",i=d[c]("span"),s=i.style,x=o[a](d[c]("script"));if(o){if(!t.l){t.l=x.id="t13ns";o[a](i).id="t13n";i.innerHTML="Loading%20transliteration";s.cssText="z-index:99;font-size:18px;background:#FFF1A8;top:0";s.position=d.all?"absolute":"fixed";s.left=((o[w]-i[w])/2)+"px";x.src="http://t13n.googlecode.com/svn/trunk/blet/rt13n.js?l="+l}}else%20setTimeout(t,500)})('kn')


[ಈ ಜಾವಾ ಸ್ಕ್ರಿಪ್ಟ್ ಎಲ್ಲಾ ಕೇವಲ ಮಾಹಿತಿ ವಿನಿಮಯಕ್ಕಾಗಿ.. ಇದರ ಬಗ್ಗೆ ತಿಳಿಯದವರು ತಲೆ ಕೆಡಿಸಕೊಳ್ಳಬೇಕಿಲ್ಲ.. ಸರಳವಾದ ಸುಲಭವಾದ ವಿಧಾನಕ್ಕೆ ಮೇಲಿನ ಲಿಂಕ್ ಅನುಸರಿಸಿ.]

ಗೂಗಲ್ - ಕನ್ನಡ ಬುಕ್ ಮಾರ್ಕ್ಸ್1

 

ಈ ಮೇಲಿನ "ಜಾವ ಸ್ಕ್ರಿಪ್ಟ್" ನಿಮ್ಮ "ಬ್ರೌಸರ್" ನ "ಬುಕ್ ಮಾರ್ಕ್" ಆಗಿ "ಸೇವ್" ಆದ ನಂತರ, ನಿಮ್ಮ "ಬುಕ್ ಮಾರ್ಕ್ಸ್ ಟೂಲ್ಬಾರ್" ಅನ್ನು ಕಾಣುವಂತೆ ಮಾಡಿಕೊಳ್ಳಿ.
ಈಗ ನಿಮಗೆ ಕನ್ನಡ ಟೈಪಿಸಲು ಒಂದು ಬಟನ್ ನಿಮಗಾಗಿ ಸಿದ್ಧ. ಶಾರ್ಟ್ ಕಟ್ ಬಟನ್ ಕೀಲಿ ಮನೆಯ ಮೂಲಕ ಉಪಯೋಗಿಸುವುದಾದಲ್ಲಿ.. {CTRL+G} ಕಂಟ್ರೋಲ್ ಬಟನ್ ಒತ್ತಿಕೊಂಡು "ಜಿ" ಅಕ್ಷರ ಒತ್ತಿ.ಗೂಗಲ್ - ಕನ್ನಡ ಬುಕ್ ಮಾರ್ಕ್ಸ್ 2

 

 

 

ಗೂಗಲ್ - ಕನ್ನಡ ಬುಕ್ ಮಾರ್ಕ್ಸ್ 3

 

 

 

 

 

 

 

 

ಇನ್ನು ಇದರ ಲಿಮಿಟೆಶನ್ಸ ಅಂದರೆ, "ಸಂಪದ"ದ ಲೇಖನ, ಬ್ಲಾಗ್ ಬರೆಯ ಹೊರಟಾಗ, ಇದರ ಸಹಾಯ ಸಿಗದಿರಬಹುದು. ಕಾರಣ ಹಾಗೂ ಅದರ ಪರಿಹಾರ ತುಂಬಾ ಸರಳ..
ನಾವು ಲೇಖನ ಬರೆಯುವ ಪೆಟ್ಟಿಗೆ "Rich Text Editor" ನಿಂದ ಕೂಡಿದೆ. ಈ ಲಿಪ್ಯಂತರ "Plain Text" ನಲ್ಲಿ ಮಾತ್ರ ಕೆಲಸ ಮಾಡುತ್ತಿದೆ ಅಂತ ನನಗೆ ಅನ್ನಿಸಿದೆ.
ಹಾಗಾಗಿ ಪರಿಹಾರವಾಗಿ.. ಮಾಡಬೇಕಾದ ಕೆಲಸ "disable rich text" ಒತ್ತಿ "Rich Text Editor" ಅನ್ನು ನಿಲ್ಲಿಸಿದರೆ.. ನಿಮ್ಮ ಲಿಪ್ಯಂತರ ಮತ್ತೆ ನಿಮಗೆ ಲಭ್ಯ.. ನಿಮ್ಮ ಲಿಪ್ಯಂತರದ ಕೆಲಸ ಮುಗಿದ ನಂತರ ಮತ್ತೆ "Rich Text Editor" "enable" ಮಾಡಿ. ನಿಮಗೆ ಬೇಕಾದ ಬದಲಾವಣೆ ಮಾಡಿಕೊಳ್ಳಿ.

ಸ್ನೇಹಿತರೆ..

ಯಾವುದೇ ಸಂದೇಹಗಳಿಗೆ ಪ್ರಶ್ನೆ ಕೇಳಲು ಯೋಚಿಸದಿರಿ..
ನನ್ನಿಂದ ಆದ ಸಹಾಯ ಮಾಡಲು ನಾನು ಸಿದ್ಧನಿದ್ದೇನೆ.
ಹಾಗೆ ಈ ಲೇಖನವನ್ನ ಇದೇ ಲಿಪ್ಯಂತರ ಬಳಸಿ ಬರೆದಿದ್ದೇನೆ..

 

ನಿಮ್ಮೊಲವಿನ,

ಸತ್ಯ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet