ಉತ್ತರಿಸು ಗೆಳತಿ

ಉತ್ತರಿಸು ಗೆಳತಿ

ಬರಹ

ಸಣ್ಣದೊ೦ದು ಬೇಸರಿಕೆ
ಸುಳಿಯಲಿಲ್ಲ.
ನಿನ್ನೆಡೆಗೆ ಚಿಕ್ಕ
ತಿರಸ್ಕಾರವೂ ಇಲ್ಲ.
ಬೇಕೆನಿಸಿದುದು ನಿಜ,
ನೀನಿಲ್ಲದ ನಾನು
ಸುಳ್ಳೆ೦ಬುದೂ ನಿಜ.
ಸಾಗರನ ಹನಿಗಳು.
ಕಣ್ಣೊಳಗೆ ತು೦ಬಿದ೦ತಿದೆ.
ಮರುಭೂಮಿಯ ಬಿಸಿಗಾಳಿ
ನಿಟ್ಟುಸಿರಾದ೦ತಿದೆ.
ಕೋಗಿಲೆಯ ಹಾಡು
ಬೇಕೆನಿಸದು,
ಚ೦ದಿರನ ಬೆಳ್ದಿ೦ಗಳು
ತ೦ಪೆನಿಸದು,
ಆಗದೆನ್ನುತ್ತಲೇ
ನನ್ನಿ೦ದ ದೂರಾದೆ.
ಮದುವೆಗಿನ್ನೆರಡು ದಿನ,
ಹೆಚ್ಚು ನೆನಪಾಗುವೆ ಏಕೆ?
ಕರೆಮಾಡಿ ಕಾಡುವೆ ಏಕೆ?
ಅರಿವಾಗದೇ ನನ್ನ ನೋವು?
ನಿನ್ನ ನಿನ್ನವರ ವಿಷಯ
ನನಗೇಕೆ ಹೇಳು?
ನನಗಿವೆ ನನ್ನದೇ
ಸಾವಿರ ಗೋಳು
ದೂರವಿರಿಸಲಾರೆ ನಿನ್ನನು
ಏಕೆ೦ಬ ಪ್ರಶ್ನೆಗೆ ಉತ್ತರ
ಕೇಳಿಕೊಳ್ಳಬೇಕೇ ನನ್ನನು?