ಎಡಬಲಗಳ ಕುಱಿತು ಒಂದು ವಿವೇಚನೆ

ಎಡಬಲಗಳ ಕುಱಿತು ಒಂದು ವಿವೇಚನೆ

ಬರಹ

ಎಡ, ಬಲ ಇದನ್ನು ಬೇಱೆ ಬೇಱೆ ಭಾಷೆಗಳಲ್ಲಿ ಬೇಱೆ ಬೇಱೆ ಪದಗಳಿಂದ ಕರೆದರೂ ಭಾವವೊಂದೇ ಆಗಿರುವುದು ಕಂಡು ಬರುತ್ತದೆ. ಕೆೞಗಿನ ಕೋಷ್ಟಕದಲ್ಲಿ ವಿವೇಚನೆಗೆ ಮುಂಚೆ ಏನು ಶಬ್ದಗಳೆಂದು ನೋಡೋಣ.

PÀ£ÀßqÀ

JqÀ §®
¸ÀA¸ÀÌöÈvÀ ªÁªÀÄ zÀQët
English

Left

Right

Greek

Levo(laevo)

dexter

 ಕನ್ನಡದಲ್ಲಿ ಎಡ, ಎಡವು, ಎಡರು, ಎಡಗ ಮತ್ತು ಎಡವಟ್ಟು ಇವು ಏನನ್ನಾದರೂ ಸಮರ್ಪಕವಾಗಿ ಆಗದಿದ್ದಾಗ ಬೞಸುವ ಶಬ್ದಗಳು. ಎಡವು=ತಪ್ಪು, ಎಡರು=ಕಷ್ಟ, ಎಡಗ= ಅಪ್ರಯೋಜಕ ಮತ್ತು ಎಡವಟ್ಟು=ಏನೋ ಸರಿಯಾಗಿ ಆಗಿಲ್ಲ. ಅಂದರೆ ಕನ್ನಡದಲ್ಲಿ ಎಡಕ್ಕೆ ಅಸಮರ್ಪಕ, ನಿಷ್ಪ್ರಯೋಜಕ ಇತ್ಯಾದಿ ಅರ್ಥ. ಆದರೆ ಬಲ=ಬಲವುಳ್ಳದ್ದು. ಇದಕ್ಕೆ ಕಾರಣ ಹೆಚ್ಚಿನ ಜನರು ದೇಹದ ಬಲಭಾಗವನ್ನು ಸಮರ್ಪಕವಾಗಿ ಬೞಸುವುದೇ ಕಾರಣವಿರಬಹುದು. ಸಂಸ್ಕೃತದ ವಾಮ=ಎಡದ ಮೂಲ ವಮ್=ವಾಂತಿಮಾಡು, ಬಿಡು. ಹಾಗಾಗಿ ವಾಮ ಇಲ್ಲಿಯೂ ಉಪಯೋಗಕ್ಕೆ ಬಾರದೆ ಬಿಟ್ಟಿದ್ದು. ದಕ್ಷಿಣ=ಬಲ, ದಕ್ಷ ಎರಡು ದಕ್ಷತೆಯ ದ್ಯೋತಕ. ಆಂಗ್ಲದ left= ಬಿಟ್ಟಿದ್ದು, ಅಂದರೆ ಇಲ್ಲೂ ಎಡಕ್ಕೆ ಸ್ಥಾನವಿಲ್ಲ. ಆದರೆ right=ಸರಿ, ದಕ್ಷ, ಬಲ (right person/man). ಇಲ್ಲೂ ಬಲಕ್ಕೆ ಪ್ರಾಶಸ್ತ್ಯ. ಗ್ರೀಕಿನ laevo(levo)=ನಿರ್ವೀರ್ಯಗೊಳಿಸಿದ್ದು, ಶಕ್ತಿಹೀನಗೊಳಿಸಿದ್ದು ಎಂದು ಎಡಕ್ಕೆ ಅರ್ಥ. dexter=ಬಲ, ಸಮರ್ಥ, ಶಕ್ತಿಯುಳ್ಳ ಎಂಬ ಅರ್ಥ ಬಲಕ್ಕೆ. ಈ ವಾದದಿಂದ ಎಡಚರು (ಎಡಭಾಗವನ್ನು ಸಮರ್ಥವಾಗಿ ಬೞಸುವವರು ಅಥವಾ ವಾಮಪಂಥೀಯರು ನನ್ನ ಮೇಲೆ ಕೋಪ ಮಾಡಿಕೊಳ್ಳಬೇಡಿ. ಭಾಷೆಯಲ್ಲಿ ಎಡಬಲದ ಮಹತ್ವದ ಕುಱಿತು ನನ್ನ ವಿವೇಚನೆಯಷ್ಟೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet