ಎರಡು ಗಝಲ್ ಗಳು.....

ಎರಡು ಗಝಲ್ ಗಳು.....

ಕವನ

೧. 

ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯಾ ಗೆಳತಿ

ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯಾ ಗೆಳತಿ

 

ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ 

ಮೈಮನಗಳಲ್ಲಿಯ ಮಧುರವಾಗಿಹ ಭಾವನೆಗಳ ಒಲವಿನೊಳಗೆ ಇರಲಾರೆಯಾ ಗೆಳತಿ

 

ಪ್ರೇಮ ಪೂಜಾರಿಯ ಹೃದಯದೊಳಗೆ ಸವಿಯು ಇರುವುದನು ಅನುಭವಿಸಿದೆಯೇನು ಗೆಳತಿ

ಬದುಕೊಳು ಛಲವಿದೆಯೆಂದಾದಲ್ಲಿ ಹೊಂಗನಸುಗಳ ನಡುವೆಯೇ ಅರಳಲಾರೆಯಾ ಗೆಳತಿ

 

ಸುಂದರವೆನಿಸುವ ಕೆಂಪಗಿನ ಗುಲಾಬಿಯಲ್ಲಿರುವ ಎಸಳಿನಂತೆ ಶೋಭಿಸಲಾರೆಯೇನು ಗೆಳತಿ

ಮುಳ್ಳುಗಳಲ್ಲಿರುವ ಮನಸ್ಥಿತಿಯ ಕಲ್ಲುಗಳೆಡೆಯಿಂದ ಹೊರಬಂದು ನಡೆಯಲಾರೆಯಾ ಗೆಳತಿ

 

ಈಶನ ನನಸಿನ ನೋಟಗಳ ಹೂವಿನ ಮೃದುವಾದ ಬಾಣಗಳಿಗೆ ಮೆಲ್ಲನೆ ನಾಚಿದೆಯೇನು ಗೆಳತಿ

ತುಟಿಯಂಚಿನಲ್ಲಿರುವ ಪ್ರಿಯವಾದ ಮಾತಿನಾಳದ ನಗುವಿನ ಹತ್ತಿರವೇ ಸುಳಿಯಲಾರೆಯಾ ಗೆಳತಿ

***

೨.

ಕೋಮಲಾಂಗಿಯು ನಾನು ಕೈಹಿಡಿಯದೇಯಿರುತ ಸುಮ್ಮನೆ *ಹಳಿಯದಿರು* ನೀನು

ತನುವಿನೊಳಗಿನ ಭಾವ ಮೋಹದಿಂದಲೇಯಿರಲು ಏನನೂ *ತಿಳಿಯದಿರು* ನೀನು

 

ಹೊಸತನದ ಹೊಂಗನಸು ಹೆಣ್ಣಿಗೇಕೇಯಿಲ್ಲ ಪುರುಷತ್ವದ ನಡುವೆ ಸೋರಿ ಹೋಗೆ

ಮೆರೆದ ದಿನಗಳ ಬಗೆಗೆ ಕೊಳೆತ ಮಾತುಗಳೇಕೆ ಕರಿಮಸಿಯ *ಬಳಿಯದಿರು* ನೀನು

 

ವಿಷಯಂತರಾಳದಲಿ ವಿಷವ ಚೆಲ್ಲಿದೆಯಂದು ನೀನಲ್ಲದೆ ಬೇರಾರು ಇಹರುಯಿಂದು

ಗತಿಯಿರದಿಹ ನನ್ನನ್ನು ವರಿಸಿಸಾಗಿದೆಯೇಕೆ ನೋವಿನೊಳು *ಒಲಿಯದಿರು* ನೀನು

 

ಮಾಗಿಯ ಚಳಿಯಲ್ಲು ಹತ್ತಿರಕೂ ಬಾರದೆ ದೂರ ಕುಳಿತಿಹ ಚಿತ್ರಣ ಹಸಿಯಾಗಿದೆ

ಕರೆಯದೆಲೆ ಬಂದಿಹೆನೆಂದು ಭಾವಿಸದಿರು ಮುಂದೆ ಇನ್ನೇನು *ಕಲಿಯದಿರು* ನೀನು

 

ಜನ್ಮದಲಿ ಹಳೆಯ ಹೊಸತರ ಸಂಗಮವು ಬೇಡ ಈಶಾ ಮನಸ್ಸು ಹಗುರವಾಗಿದೆ

ಕಸದಂತಿರುವಾ ತನುವಿನಲ್ಲಿ ಬೀಜವನು ಬಿತ್ತಲುಯೆಂದೂ *ಬಲಿಯದಿರು* ನೀನು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್