ಎರಡು ಗಝಲ್ ಗಳು....

ಎರಡು ಗಝಲ್ ಗಳು....

ಕವನ

ಗಝಲ್ ೧

ಮಧು ಭಾವವೇ ಕೊಚ್ಚಿತೆ ಗೆಳತಿ

ಮನದ ಕಾಮವೇ ಚಚ್ಚಿತೆ ಗೆಳತಿ

 

ಮೌನ ಇಲ್ಲದೆ ಚಿಂತೆಯು ಇಹುದೆ

ಕಾಣದ ಕನಸಿಂದು ಚುಚ್ಚಿತೆ ಗೆಳತಿ

 

ಪ್ರೀತಿಯ ಮೈಯಿಗೆ ಬೀಗವು ಬಿದ್ದಿತು

ಪಾಠದಾಚೆ ಪ್ರೇಮವೇ ಬೆಚ್ಚಿತೆ ಗೆಳತಿ

 

ಬೆಳ್ಳನೆ ಹೊಳಪು ಬಾನೊಳು ಎಲ್ಲಿದೆ

ಚಂದ್ರನ ಮೋಡವೇ ಮುಚ್ಚಿತೆ ಗೆಳತಿ

 

ಸನಿಹಕು ಬಾರದೇ ಹೋದನೆ ಈಶಾ

ತನುವಿನ ಮೋಹವೂ ಕಚ್ಚಿತೆ  ಗೆಳತಿ

***

ಗಝಲ್೨

ಒಳಗೊಂದು ಧ್ವನಿಯು ಉಸಿರಾಡುತಲೇ ಕೂಗುತಿದೆ ಜಾತಿ

ಇದ್ದವರ ಹೃದಯವು ರಕ್ತದ ಜೊತೆಗಿಂದು ಅರಚುತಿದೆ ಜಾತಿ

 

ಸರಕಾರಿ ಕಛೇರಿಗಳಲ್ಲಿಯ ಬರಹಗಳಲ್ಲಿ ನಾವ್ಯಾರೆಂದು ಬೇಕೆ

ಕತ್ತೋ ಉಳುಕಿ ತಲೆಯೆತ್ತಲು ಆಗದಿದ್ದರೂ ಹೇಳುತಿದೆ ಜಾತಿ

 

ಈಗೀಗ ಕಾನೂನುಗಳೆಲ್ಲವೂ ಗಾಳಿಯಲ್ಲಿ ತೂರಿಕೊಂಡಿದೆಯೊ

ಧರಣಿಕೂತವರಿಗೆ ಚೊಂಬಿನಲ್ಲಿ ನೀರಿಡುತ್ತಲೇ ಕಾಡುತಿದೆ ಜಾತಿ

 

ಮುಟ್ಟಿಸಿಕೊಳ್ಳದ ತತ್ವಗಳಡಿ ಆಡಳಿತ ಯಂತ್ರ ಕೆಲಸ ಮಾಡುತ್ತಿದೆ 

ಸಮಾನತೆಗೆ ಅಡ್ಡಲಾದ ಕಾನೂನುಗಳೇ ಇಂದು ಆಡುತಿದೆ ಜಾತಿ

 

ನಿಜವಾದ ಆಲೋಚನೆಯು ಭವಿಷ್ಯದಡಿಯೆ ಸಾಗುವುದೇ  ಈಶಾ 

ಸ್ವಾತಂತ್ರ್ಯದ ನೆಲವಿಂದು ಮತಗಳೆಡೆ ಸಿಲುಕುತ್ತಾ ಗೆಲ್ಲುತಿದೆ ಜಾತಿ

 

-ಹಾ ಮ ಸತೀಶ ಬೆಂಗಳೂರು*

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್