ಎಳೆಯ ಗೇರುಬೀಜದ ಪಲ್ಯ

ಎಳೆಯ ಗೇರುಬೀಜದ ಪಲ್ಯ

ಬೇಕಿರುವ ಸಾಮಗ್ರಿ

ಈಗ ಎಳೆಯ ಗೇರುಬೀಜದ ಸೀಸನ್ ನಡೆಯುತ್ತಿದೆ. ಆದುದರಿಂದ ಈ ಎಳೆಯ ಗೇರು ಬೀಜಗಳನ್ನು ಬಳಸಿ ಪಲ್ಯ ತಯಾರಿಸುವುದು ಸುಲಭ ಮತ್ತು ರುಚಿಕರ. 

ಬೇಕಾಗುವ ಸಾಮಾಗ್ರಿಗಳು: ಸುಲಿದು ಎರಡು ಭಾಗ ಮಾಡಿದ ಎಳೆಯ ಗೇರು ಬೀಜಗಳು ೧೦೦ರಷ್ಟು, ಸಾಸಿವೆ ೧ ಚಮಚ, ಕೆಂಪು ಮೆಣಸು ೩-೪, ಎಣ್ಣೆ ಸ್ವಲ್ಪ. ರುಚಿಗೆ ಉಪ್ಪು, ಸ್ವಲ್ಪ ತೆಂಗಿನ ಕಾಯಿಯ ತುರಿ, ಚಿಟಕಿಯಷ್ಟು ಸಕ್ಕರೆ, ಸ್ವಲ್ಪ ಇಂಗು.

 

ತಯಾರಿಸುವ ವಿಧಾನ

ತಯಾರಿಕಾ ವಿಧಾನ: ಮೊದಲಿಗೆ ಬಾಣಲೆಗೆ ಸ್ವಲ್ಪ ಎಣ್ಣೆಯನ್ನು ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಮತ್ತು ಕೆಂಪು ಮೆಣಸನ್ನು ಹಾಕಿ ಹುರಿಯಿರಿ. ಸಾಸಿವೆ ಸಿಡಿದ ನಂತರ ಕತ್ತರಿಸಿದ ಗೇರು ಬೀಜಗಳನ್ನು ಬಾಣಲೆಗೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯುವಷ್ಟು ಸ್ವಲ್ಪ ನೀರು ಹಾಕಿ, ಬಾಣಲೆಯ ಬಾಯಿ ಹಾಕಿ ಸ್ವಲ್ಪ ಸಮಯದವರೆಗೆ ಬೇಯಿಸಿ. ಬೆಂದ ಮೇಲೆ ತೆಂಗಿನ ತುರಿ, ಸ್ವಲ್ಪ ಇಂಗಿನ ನೀರು, ಚಿಟಿಕೆಯಷ್ಟು ಸಕ್ಕರೆ ಹಾಕಿ ಮಗುಚಿ ಕೆಳಗಿಡಿ. ಗೇರುಬೀಜದ ಜೊತೆ ಎಳೆಯ ತೊಂಡೆಕಾಯಿಗಳನ್ನೂ ಕತ್ತರಿಸಿ ಜೊತೆಯಲ್ಲೇ ಬೆರೆಸಿ ಪಲ್ಯ ತಯಾರಿಸಿದರೆ ಇನ್ನೂ ರುಚಿಕರವಾಗಿರುತ್ತದೆ. ಸಿಂಪಲ್ ವಿಧಾನ ಬೇಗನೇ ತಯಾರಾಗುವ ಪಾಕವನ್ನೊಮ್ಮೆ ಮಾಡಿ ನೋಡಿ.

ಹೇಳಿದ್ದು ನನ್ನ ಅಮ್ಮ ಕೆ.ಪಿ.ಸುಲೋಚನಾ ರಾವ್