ಒಂದು ಒಳ್ಳೆಯ ನುಡಿ (211) - ದೇಹದೇಗುಲದಲ್ಲಿ !

ಇತ್ತೀಚಿಗಷ್ಟೇ ದಿನದ ಬೇರೆಬೇರೆ ಸಮಯಕ್ಕೆ ತಕ್ಕಂತೆ ಆರೋಗ್ಯ ಆಹಾರ ಎಂಬುದರ ಬಗ್ಗೆ ತಿಳಿಯಿತು. ಇವತ್ತು ಬೆಳಿಗ್ಗೆ ತಿರುಕನ ಪುಸ್ತಕ ಓದುತ್ತಿದ್ದೆ. ಅದರಲ್ಲವರು ಋತುಗಳಿಗೆ ತಕ್ಕಂತೆ ಆಹಾರ, ದಿನಚರಿಯನ್ನು ಬದಲಿಸಿರಿ ಎಂದು ಚಂದವಾಗಿ ಬರೆದಿದ್ದಾರೆ.
ಆಹಾರದಲ್ಲಿ ಉಪ್ಪು, ಹುಳಿ, ಖಾರ ಮತ್ತು ಎಣ್ಣೆಯಂಶ ಬೇಸಿಗೆಯಲ್ಲಿ ಕಡಿಮೆಯಿರಬೇಕು. ಕ್ರಮೇಣ ಮಳೆಗಾಲದಲ್ಲಿ ತುಸು ಹೆಚ್ಚುತ್ತಾ ಚಳಿಗಾಲದಲ್ಲಿ ಕೊಂಚ ಹೆಚ್ಚಿರಬೇಕು. ಸ್ನಾನ ಮಾಡುವ ನೀರಿನ ಬಿಸಿಯೂ ಹಾಗೆಯೇ ಚಳಿಗಾಲದಲ್ಲಿ ಬೆಚ್ಚಗೆ, ಮಳೆಗೆ ಬಿಸಿ ಹಾಗೂ ಬೇಸಿಗೆಗೆ ತಂಪಾಗಬೇಕು. ಬೇಸಿಗೆ ಬಂದಾಗ ಕುಡಿಯುವ ನೀರಿನ ಪ್ರಮಾಣವೂ ಹೆಚ್ಚಬೇಕು. ಆಯಾ ಕಾಲದ ಹಣ್ಣುಗಳನ್ನು ಮಾತ್ರ ಸೇವಿಸಬೇಕು. ವ್ಯಾಯಾಮಾದಿಗಳೂ ಬೇಸಿಗೆಯಲ್ಲಿ ಕಡಿಮೆಯಿರಬೇಕು. ಉಳಿದ ಕಾಲಗಳಲ್ಲಿ ಹೆಚ್ಚಬೇಕು. ಬಟ್ಟೆಗಳನ್ನೂ ಕಾಲಕ್ಕೆ ತಕ್ಕಂತೆ ತೊಡಬೇಕು. ಚರ್ಮದ ಆರೈಕೆಯನ್ನೂ ಕಾಲಕ್ಕೆ ತಕ್ಕಂತೆ ಮಾಡಬೇಕು. ಇದಿಷ್ಟು ಸಾಮಾನ್ಯ ಜ್ಞಾನ. ಇನ್ನೂ ಆಳವಾಗಿ ತಿಳಿಯಲು ನೀವೇ ಪುಸ್ತಕ ಓದುವುದು ಸರಿ !
-ಮೇಘನಾ ಭಟ್
ಚಿತ್ರ ಕೃಪೆ: ಇಂಟರ್ನೆಟ್ ತಾಣ