ಒಂದು ಒಳ್ಳೆಯ ನುಡಿ - 252
ಹಿರಿಯ ಸಾಹಿತಿ ಕವಿ ಬಿ.ಎಂ.ಶ್ರೀಕಂಠಯ್ಯನವರು ಬರೆದ ಸಾಲು--"ಕನ್ನಡ ನಾಡಿಗೆ ಕನ್ನಡವೇ ಗತಿ, ಅನ್ಯ ಭಾಷೆ ಕೇವಲ ವ್ಯವಹಾರಕ್ಕೆ ಮಾತ್ರ." ಎಷ್ಟು ಸತ್ಯವಲ್ಲವೇ?
ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು.
ಕನ್ನಡ ಭಾಷೆಯನ್ನು ನಾವೇ ಬೆಳೆಸಬೇಕು, ಅನ್ಯರುಯಾಕೆ ಬೆಳೆಸುವರು? ನಾವೇ ತುಳಿದರೆ ಚಿಗುರುವುದಾದರೂ ಹೇಗೆ? ಭಾಷೆ ಎನ್ನುವುದು ವ್ಯಾಪಾರಕ್ಕಾಗಿ ಮಾತ್ರವಲ್ಲ, ಜನಾಂಗಗಳನ್ನು ಬೆಸೆಯುವ ಮಾಧ್ಯಮವದು. ಸಂಸ್ಕಾರವಡಗಿದೆ ಅದರೊಳಗೆ.
"ಏರಿಸಿ ಹಾರಿಸಿ ಕನ್ನಡದ ಬಾವುಟ
ಬಾಳ್ ಕನ್ನಡ
ಏಳು ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ"
ನಮ್ಮಲ್ಲಿ ಕನ್ನಡದ ಬಗ್ಗೆ ಅಭಿಮಾನ ,ಕೆಚ್ಚು, ಭಾಷೆಯನ್ನು ಅಭಿವೃದ್ಧಿ ಪಡಿಸಬೇಕೆಂಬ ಮನಸ್ಸು ಎಲ್ಲವೂ ಇರಬೇಕು. ಸಾಧಿಸುವ ಛಲವಿರಬೇಕು. ಕಲಿಯಲು ಆಸಕ್ತಿ ಇಲ್ಲದವರೂ ಕಲಿಯಲು ಮುಂದೆ ಬರುವಂತಿಬೇಕು, ಭಾಷಾ ಆಕರ್ಷಣೆ ಎಂದರೆ ಇದೇ ಅಲ್ಲವೇ? "ಕನ್ನಡದ ಸೊಗಡನ್ನು ಅನ್ಯದಲಿ ಕಾಣೆ" ಕನ್ನಡದ ಮಣ್ಣಿನಲ್ಲಿ ಕನ್ನಡವ ಕಡೆಗಣಿಸದಿರೋಣ.
(ಆಕರ: ಹಿರಿಯ ಸಾಹಿತಿಗಳ ನುಡಿಮುತ್ತು)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ