ಒಂದು ಒಳ್ಳೆಯ ನುಡಿ - 253
ಕನ್ನಡ ಭಾಷೆ, ಕನ್ನಡಮ್ಮನ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೆ. ಕನ್ನಡ ನುಡಿಗಳು, ಕನ್ನಡ ತಾಯಿಯ ಕುರಿತಾಗಿ ನಮ್ಮ ಹಿರಿಯ ಸಾಹಿತಿಗಳ ಮಾತುಗಳು, ನುಡಿಗಟ್ಟುಗಳು, ಕಥೆ, ಕವನ, ಕಾವ್ಯ, ಲೇಖನಗಳು ಅಪಾರ. ಸಾಹಿತಿ ತೀ.ನಂ.ಶ್ರೀಕಂಠಯ್ಯನವರ ಒಂದು ಕವನದ ಸಾಲುಗಳು ಇಂತಿವೆ.
"ಒಬ್ಬ ಕನ್ನಡ ದೇವಿಯುದರದಿಂದೊಗೆದು
ಒಬ್ಬ ಕನ್ನಡ ಜನನಿ ಎದೆಹಾಲ ಮೊಗೆದು
ಒಬ್ಬ ಮಾತೆಯ ಮಡಿಲ ತೊಡೆಗಳಲಿ ಕುಣಿದು
ಒಬ್ಬ ತಾಯುಲಿಗಳನೆ ತೊದಲಿ ನುಡಿದು
ಬೆಳೆದ ಕನ್ನಡಿಗರೇ,ಬಂಧು ಕನ್ನಡಿಗರೇ
ಇನಿದು ಕನ್ನಡಿಗರೇ,ಸ್ವಾಗತವು ನಿಮಗೆ".
ಕನ್ನಡ ಪದಗಳು ಎಷ್ಟೊಂದು ಆಕರ್ಷಣೆ, ಏನೊಂದು ಸೆಳೆತ. ನಮ್ಮ ಮಕ್ಕಳಿಗೂ ಕನ್ನಡ ಅಕ್ಷರ ಕಲಿಸುವುದರದೊಂದಿಗೆ, ಮಾತನಾಡಲೂ ಪ್ರೋತ್ಸಾಹಿಸೋಣ.
(ಆಕರ:ಹಿರಿಯ ಸಾಹಿತಿಗಳ ನುಡಿಮುತ್ತು)
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ