ಒಂದು ಒಳ್ಳೆಯ ನುಡಿ - 264

ಹೆಣ್ಣು ಮಗುವೆಂದರೆ ಮನೆಯ ಭಾಗ್ಯವಂತೆ. ಆಕೆ ಮನೆಯ ನಂದಾದೀಪದಂತೆ ಮನೆಯ ಸೌಭಾಗ್ಯ. ಅನಗತ್ಯವಾಗಿ ಹೆಣ್ಣು ಮಗಳ ಕಣ್ಣಿನಲ್ಲಿ ನೀರು ಹಾಕಿಸಬಾರದೆಂದೂ, ಅದು ಮನೆಗೆ ಶ್ರೇಯಸ್ಸಲ್ಲವೆಂದು ಹೇಳುವುದು ಕೇಳಿದ್ದೇನೆ. (ಮನದ ನೋವನ್ನು, ಅಳಿಸಲಾರದ ಗಾಯವನ್ನು, ಮಾತಿನ ಓಘದ ವ್ಯಂಗ್ಯವನ್ನು ಔಡುಗಚ್ಚಿ ಸಹಿಸಿಕೊಂಡು ಕಣ್ಣೀರಿನ ರೂಪದಲ್ಲಿ ಹೊರಹಾಕಿ ಮನಸ್ಸನ್ನು ಹಗುರ ಮಾಡಿಕೊಳ್ಳುವುದು ಸಾಮಾನ್ಯ. ತನ್ನದಲ್ಲದ ತಪ್ಪಿನ್ನು ಮೈಮೇಲೆ ಹಾಕಿಕೊಳ್ಳುವ ಪ್ರಸಂಗ ಆಕೆಯ ಜೀವನದಲ್ಲಿ ಸಾಮಾನ್ಯ. ಹೆಣ್ಣು ಮಗುವಿಗೆ ಉತ್ತಮ ಗುಣನಡತೆಯನ್ನು, ಸಂಸ್ಕಾರವನ್ನು ಕಲಿಸಿ, ಯೋಗ್ಯಳನ್ನಾಗಿ ಬೆಳೆಸುವುದು ಹೆತ್ತವರ ಕರ್ತವ್ಯ ಮತ್ತು ಜವಾಬ್ದಾರಿ. ಬಂಧುಗಳೇ, ಹೆಂಡತಿ, ಮಗಳು, ಸಹೋದರಿ, ತಾಯಿ, ಅತ್ತೆ, ಅಜ್ಜಿಯಾಗಿ ಬದುಕಿನ ನಾನಾ ಹಂತಗಳಲ್ಲಿ ಆನಂದ, ಸಂತೋಷವಿತ್ತು, ಮನೆಯ ಗೃಹಿಣಿಯಾಗಿ ಜವಾಬ್ದಾರಿ ಹೊರುವ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಪ್ರೀತಿ, ಕಾಳಜಿಯಿಂದ ಜೋಪಾನ ಮಾಡಿ, ಗೌರವದಿಂದ ನೋಡಿಕೊಳ್ಳೋಣ.
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ