ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)

ಒಂದು ಕವನ-ಮತ್ತು--- ಕಾರಣ... (ತೋಚಿದ್ದು-ಗೀಚಿದ್ದು)

ಕವನ

 ಬರೆಯಲೇ ಬೇಕು ಒಂದು ಕವನ

ಅದ್ಕೆ ಬೇಕು -ಒಂದು ಕಾರಣ
ಬೇಕು  ಅದ್ಕೆ
ಪ್ರಶಾಂತ 'ವಾತಾವರಣ' 

ಅದ್ಕೆ ಹುಡುಕಿಕೊಂಡು  ಹೊರಟೆ ನಾ-  ಒಂದು  ಕಾನನ!! 

ಗೀಚ ಹೊರಟೆ ಒಂದು ಕವನ

ಸುತ್ತ ಮುತ್ತ -ಭರೀ ಶಬ್ದ

ಹಕ್ಕಿ-ಪಿಕ್ಕಿ

 ಗಳ  ಕಲರವ

ಮನ ಆಯ್ತು ಕಲ್ಲೆಸೆದ ಕೊಳ,

ಕಲ್ಲೆಸೆದು ಹಕ್ಕಿಗಳ ಓಡಿಸಿ,

ಮತ್ತೆ ಬರೆಯ ಹೊರಟೆ ಕವನ,

ನಿಂತಿತು ಲೇಖನ

ಅದ್ಕೆ ಕಾರಣ?

ನೀರವ  ಮೌನ.

ಅರಿಯಿತು ಮನ

ಚಿಂತೆ 'ಇಲ್ಲದವನಿಗೆ' -ಸಂತೇಲೂ 'ನಿದ್ಧೆ' ....!!                       

ಬರೆಯಲು ಕವನ

ಬೇಕಿಲ್ಲ

ಏನೊಂದು ಕಾರಣ...

 

(ತೋಚಿದ್ದು-ಗೀಚಿದ್ದು)

 

 

 ಚಿತ್ರ ಮೂಲ  : 

http://stem.sfasu.edu/

 

 

Comments