ಒಂದು ನ್ಯಾನೋ ಕಥೆ- ಆತ

ಒಂದು ನ್ಯಾನೋ ಕಥೆ- ಆತ

ಆತ ಭಾವಜೀವಿ. ಆತನಿಗೆ ಹೆಣ್ಣು ಮಕ್ಕಳೆಂದರೆ ಪ್ರಾಣ, ಆದರೆ ದೇವರು ಆತನಿಗೆ ಬರೀ ಗಂಡು ಮಕ್ಕಳನ್ನೇ ದಯಪಾಲಿಸಿ ಮೋಸ ಮಾಡಿ ಬಿಟ್ಟ!  ಆ ಮಕ್ಕಳನ್ನೇ ತನ್ನ ಯೋಗ್ಯತೆಗೆ ತಕ್ಕಂತೆ ಪ್ರೀತಿಯಿಂದ ಬೆಳೆಸಿದ. ಅವರು

 ಇಷ್ಟಪಟ್ಟವರೊಂದಿಗೆ ಮದುವೆಯನ್ನೂ ಮಾಡಿದ!ಮದುವೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಕುಣಿದಾಡಿದ, ಹಾಡಿದ!  ಮದುವೆಯಾದ ಮಾರನೇ ದಿನ, ಮಗನ ಮೇಲೆ ಯಾವುದೋ ಮಾತಿಗೆ ತನ್ನ ಹಕ್ಕನ್ನು ಚಲಾಯಿಸಿದ. ಬೀಗರೆದುರೇ ಮಗ ಹೇಳಿದ " ನನ್ನ ಹೆಂಡತಿ ನನ್ನಿಷ್ಟ"! ಆತ ತತ್ತರಿಸಿ ಹೋದ!

-ಪರಮೇಶ್ವರಪ್ಪ ಕುದರಿ