ಕಣ್ಮುಚ್ಚಲಿದೆ 'ಸಂಪದ'

ಕಣ್ಮುಚ್ಚಲಿದೆ 'ಸಂಪದ'

ಬರಹ

ಸದಸ್ಯರ ಗಮನಕ್ಕೆ:

ಚುನಾವಣೆಯ ಸಮಯ ಅಂತರ್ಜಾಲದಲ್ಲಿ ಬೇಡದ ಸುದ್ದಿ ಹರಡಬಲ್ಲ ಬ್ಲಾಗುಗಳು, ಅಂತರ್ಜಾಲ ಸಮುದಾಯಗಳು ಕಾರ್ಯನಿರ್ವಹಿಸಕೂಡದು ಎಂದು ಎಲೆಕ್ಷನ್ ಕಮೀಶನ್ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ಸರ್ಕಾರ ಕನ್ನಡದಲ್ಲೂ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.

ಮೂಲ ಆದೇಶದಲ್ಲಿ "ಚುನಾವಣೆ ಸಮಯ ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ.

ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ 'ಸಂಪದ'ದಲ್ಲಿ ನಡೆದಿರುವ ಹಲವಾರು ಮಾತು, ಚರ್ಚೆಗಳನ್ನು ಕೂಡಲೆ ಅಳಿಸಿ ಹಾಕುವುದರ ಜತೆಗೆ ಮೂರು ದಿನಗಳ ಒಳಗೆ ಇಡೀ ವೆಬ್ಸೈಟನ್ನು ಮುಚ್ಚುಹಾಕುತ್ತಿದ್ದೇವೆಂದು ಅಧಿಕೃತವಾಗಿ ಈ ಮೂಲಕ ತಿಳಿಸುತ್ತ ಖೇದ ವ್ಯಕ್ತಪಡಿಸುತ್ತಿದ್ದೇವೆ.

- 'ಸಂಪದ' ನಿರ್ವಹಣೆ

(ಈ ಸೂಚನೆ [:http://sampada.net/article/8137|ಹೋದ ವರ್ಷ ರೆಡಿ ಮಾಡಿದ] 'ಅನಿವಾಸಿ'ಯವರಿಗೆ 'ಸಂಪದ'ದ ಸಮಸ್ತ ಸದಸ್ಯರ ಪರವಾಗಿ ವಂದನೆಗಳು).