ಕಥೆಯಾದಳು ಹುಡುಗಿ
ಬರಹ
ಬಹಳ ದಿನಗಳ ಮೇಲೆ ಅಮ್ಮ ಹೆತ್ತಳು ಕಣ್ಮಣಿ ಸುತೆ
ಕೊನೆಗಾಲದಿ ಆಸರೆಯಾಗಲು ಕರೆದಳು ಅವಳ ಆಶ್ರಿತೆ
ಮೂಲ ನಕ್ಷತ್ರದ ಎರಡನೆ ಪಾದದ ಸಂಜಾತೆ
ಕಣ್ಣು ತೆರೆಯುವ ಮೊದಲೇ ತಾಯ ಕಳೆದುಕೊಂಡ ಆಶ್ರಿತೆ
ಪತ್ನಿ ವಿಯೋಗದ ದು:ಖ ಮರೆಯಲು ಪತಿಗೆ ಕುಡಿತದ ಮೊರೆ
ತಂದೆ ತಾಯಿಯ ಪ್ರೀತಿ ಕಾಣದ ಮಗುವಿಗೆ ಜೀವನವೇ ಹೊರೆ
ಯಾವ ಅಡೆ ತಡೆಯಿಲ್ಲದೆ ಬೆಳೆಯಿತು ಮಗು ಬೇಕಾಬಿಟ್ಟಿ
ಸಮಾಜ ನೋಡುತಿಹದು ಅವಳ ಸ್ಥಿತಿ ತನ್ನ ಕೈ ಕಟ್ಟಿ
ಆಗಾಯಿತು ನಮ್ಮ ಹೀರೋ ಸಮಾಜ ಸೇವಕನ ಎಂಟ್ರಿ
ಮುಂದೆ ಗೊತ್ತಾಗುವುದು ಅವನೆಂತಹ ಕಂತ್ರಿ
ಹೇಳಿದ ಆಶ್ರಿತೆ ಇನ್ನೂ ಆಟವಾಡುವ ಕೂಸು
ಮಾತಿನ ಮೋಡಿಗೆಳೆದು ಅವಳ ಮಡಿಲಿಗಿಟ್ಟ ಒಂದು ಕೂಸು
ಅವಳಿಗಾಗಿ ಮರುಗುವವರಿಗೆ ಹೇಳಿದ ಹೋಗುವೆನು ದುಡಿಯಲು ದುಬಾಯಿ
ದೂರದಿಂದಲೇ ಇವರೆಲ್ಲರಿಗೂ ಹೇಳಿದ ಬೈ ಬೈ
ಕೂಸುಗಳನ್ನು ನೋಡಲು ಮತ್ತೆ ಬಂದ ಇನ್ನೊಬ್ಬ ಸಮಾಜ ಸೇವಕ
ಅವನೂ ಹಿಂದಿನವನಂತೆಯೇ ಒಬ್ಬ ಸಮಯ ಸಾಧಕ
ಎಲ್ಲರೆದುರಿಗೆ ಮರುಗಿದ ಇವಳು ಎಂದೂ ಬಾಳಬೇಕಾದ ಹೆಣ್ಣು
ಬೇರೆಡೆಗೆ ಕರೆದೊಯ್ದು ಮಾಡಿದ ಅವಳ ಬೆಲೆವೆಣ್ಣು
ಬಂತು ಇನ್ನೊಂದು ಬಾರಿ ಮಗದೊಬ್ಬ ಸಮಾಜ ಸೇವಕನ ಎಂಟ್ರಿ
ಆಶ್ರಿತೆಗೆ ನೀಡಿದ ನಿರೀಕ್ಷಿಸದ ಛಾವಣಿ ಸುಖವನ್ನು
ಪತಿ ಪತ್ನಿ ಮಗು ಮನೆಗಾಗಿ ದಾಟಲು ನಡೆದರು ರೈಲ್ವೆ ಹಳಿ
ದೈತ್ಯ ವಿಧಿ ಹಾದಿಯೆಲ್ಲ ಚೆಲ್ಲಿತು ರಕ್ತದೋಕುಳಿ
ಛೇ! ಹೇಗೆ ಕಥೆಯಾಗಿ ಹೋದಳು ನಮ್ಮ ಮುದ್ದಿನ ಹುಡುಗಿ ಆಶ್ರಿತೆ