ಕನ್ನಡವೇ ಯಾರಿಗೆ ಬೇಕ್ರೀ.... ಹೋಗ್ರೀ ಹೋಗ್ರಿ
ಬರಹ
ರೈಲ್ವೇ ಇಲಾಖೆಯವರ ಉದ್ಧಟತನ ಮತ್ತೊಮ್ಮೆ ತನ್ನ ಪರಾಕಾಷ್ಠೆಯನ್ನು ತೋರಿದೆ. ಹೊಸದೊಂದು ಆದೇಶದ ಪ್ರಕಾರ ಇನ್ನುಮುಂದೆ ರೈಲಿನಲ್ಲಿ ಹಿಂದಿ ಮತ್ತೆ ಇಂಗ್ಲೀಷಿನ ಫಲಕಗಳು ಮಾತ್ರವೇ ಇರಬೇಕು. ತಮಿಳು ಮಾತ್ರವೇ ಇವರಿಗೆ ಪ್ರಾದೇಶಿಕ ಭಾಷೆ ಆದ್ದರಿಂದ ತಮಿಳು ಇರಬಹುದು. ಇನ್ನುಳಿದ ಭಾಷೆಯ ಫಲಕಗಳನ್ನು ತೆಗೆಯತಕ್ಕದ್ದು. ಅಧಿಕಾರಿಗಳು ಇದನ್ನು ಎಷ್ಟು ಬೇಗ ಕಾರ್ಯಗತಗೊಳಿಸಿದ್ದಾರೆಂದರೆ, ಈಗಾಗಲೇ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ಸಿನಲ್ಲಿದ್ದ ಕನ್ನಡದ ಬೋರ್ಡುಗಳು ಮಾಯ. ಇನ್ನು ಮುಂದೆ ಇನ್ನೇನು? ಮದರಾಸಿನಿಂದಲೋ ಅಥವಾ ನಾಗರಕೊಯಿಲಿನಿಂದಲೋ ಬೆಂಗಳೂರಿಗೆ ಬರುವ ರೈಲಿನ ಮೇಲೆ "ಪ್ರಾದೇಶಿಕ ಭಾಷೆಯೊಂದೇ" ಇರುವುದು. ಇದರ ಬಗ್ಗೆ ಪಿಟಿಷನ್ನೊಂದನ್ನು ಕಳಿಸಿದರೆ ಅದು ಪ್ರಯೋಜನಕಾರಿಯಾಗ ಬಲ್ಲುದೇ? ಆಗದಿದ್ದರೆ ಚಿಂತೆಯಿಲ್ಲ ನಾವೇ ತಮಿಳನ್ನು ಓದಲು ಕಲಿತರಾಯಿತು. :))
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ