ಕನ್ನಡ ಪತ್ರಿಕಾ ಲೋಕ (ಭಾಗ ೧೮೫) - ದೆಹಲಿ ಕನ್ನಡಿಗ
ಬಾ. ಸಾಮಗ ಅವರ "ದೆಹಲಿ ಕನ್ನಡಿಗ"
ಉಡುಪಿಯವರಾಗಿರುವ ಬಾ. ಸಾಮಗ (ಎಂ. ಬಿ. ಸಾಮಗ) ಅವರು ದೆಹಲಿಯಲ್ಲಿದ್ದುಕೊಂಡು ಸುಮಾರು ಮೂವತ್ತಕ್ಕೂ ಅಧಿಕ ವರುಷಗಳ ಕಾಲ ಮುನ್ನಡೆಸಿದ ಮಾಸ ಪತ್ರಿಕೆ "ದೆಹಲಿ ಕನ್ನಡಿಗ". 1983ರಲ್ಲಿ ಅವಧಿಯಲ್ಲಿ ದೆಹಲಿ ಕನ್ನಡಿಗ ಆರಂಭವಾಗಿತ್ತು. ಟ್ಯಾಬ್ಲಾಯ್ಡ್ ರೂಪದಲ್ಲಿ ಎಂಟು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ ಒಂದು ರೂಪಾಯಿಯಾಗಿತ್ತು. ಐದು ವರ್ಷಕ್ಕೆ ನೂರು ರೂಪಾಯಿಯಂತೆಯೂ, ಪೋಷಕ ಮೊತ್ತವಾಗಿ ಐನೂರು ರೂಪಾಯಿಗಳನ್ನೂ ಸಂಗ್ರಹಿಸಲಾಗುತ್ತಿತ್ತು.
ಪತ್ರಿಕೆಯ ಸಂಪಾದಕರು, ಪ್ರಕಾಶಕರು, ಮುದ್ರಕರು ಮತ್ತು ಮಾಲಕರು ಬಾ. ಸಾಮಗರೇ ಆಗಿದ್ದರು. ಲೋನಿ ರಸ್ತೆ ಜ್ಯೋತಿ ಕಾಲನಿಯ ಫೈನ್ ಅಫ್ ಸೆಟ್ ಪ್ರೆಸ್ ನಲ್ಲಿ ಪತ್ರಿಕೆ ಮುದ್ರಣವಾಗುತ್ತಿತ್ತು. ದೆಹಲಿ ಕನ್ನಡಿಗ ಪತ್ರಿಕೆ ವತಿಯಿಂದ ಆಯೋಜಿಸುತ್ತಿದ್ದ ಕಾರ್ಯಕ್ರಮಗಳ ವರದಿಗಳು, ನಗೆಹನಿಗಳು, ಸಣ್ಣ ಪುಟ್ಟ ಲೇಖನಗಳು ಮತ್ತು ಜಾಹೀರಾತುಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು.
~ ಶ್ರೀರಾಮ ದಿವಾಣ