ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ

ಕನ್ನಡ ಸಿನಿಮಾಗಳಲ್ಲಿ ತೆಲುಗು ಡೈಲಾಗ್ ಏಕೆ

ಈ ನಿರ್ದೇಶಕರಿಗೆ ನಮ್ಮ  ಕನ್ನಡ ಸಿನಿಮಾಗಳಲ್ಲಿ ೨೦% ರಿಸರ್ವೇಶನ್ ಅನ್ನು ತೆಲುಗು ಭಾಷೆ ಡೈಲಾಗ್ ಬಳಕೆ ಮಾಡದೆ ಹೋದರೆ ಸಮಾಧಾನ ಆಗುವುದೇ ಇಲ್ಲವೇನೋ ಅದಕ್ಕೆ ತಾಜಾ ಉದಾಹರಣೆ ಕೇಳ ದಿನಗಳ ಹಿಂದೆ ತೆರೆಕಂಡ "ಪರಾರಿ" ಸಿನಿಮಾ  ಅತ್ಯುತ್ತಂ ಉದಾಹರಣೆ,ಆ ಸಿನಿಮಾ ಅನ್ನ್ನು ಕನ್ನಡ ಜನ ತಿರಸ್ಕರಿಸಿದ್ದು ಉತ್ತಂ ಬೆಳವಣಿಗೆ ಇನ್ನು ಹಳೆಯದನ್ನು ಕೆದಕುತ್ತಾ ಹೋದರೆ ಕನ್ನಡದ ಕಂಡ ನಮ್ಮ ಶಿವಣ್ಣ ಅಭಿನಯದ "ಸತ್ಯ ಇನ್ ಲವ್" ಚಿತ್ರದಲ್ಲಿ ೫೦ಕ್ಕಿ೦ತ್ ಹೆಚ್ಚು ತಲುಗು ಸಂಭಾಷಣೆಯೇ ಇದೆ ಹಾಗೆ ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಬುದ್ದಿವಂತ ಸಿತ್ರದಲ್ಲ್ಲಿ ತೆಲುಗಿನಲ್ಲಿ ಹಾಡೊಂದು ಇದೆ..ಏಕೆ ಈ ತೆಲುಗು ಪ್ರೀತಿ ನಮ್ಮ ಕನ್ನಡ ನಿರ್ದೇಶಕರಿಗೆ ಅನ್ನೋದು ನಿಗೂಡ.ಆದ್ರೆ ಬುದ್ದಿವನ್ತನ್ನನು ಬಿಟ್ಟು ಉಳಿದೆರಡು ಸಿನಿಮಾಗಳು ಸೋತಿದ್ದು  ನನಗೆ ಸಮಾಧಾನದ ವಿಷಯ ಇನ್ನಾದರು ಕನ್ನಡ ಸಿತ್ರಗಳಲ್ಲಿ ಪರ್ಅಭಾಷೆ ಬಳಕೆ ಮಿತವಾಗಿರಲಿ..ಊಟಕ್ಕೆ ಉಪ್ಪಿನಕಾಯಿ ಬೇಕೇ ಹೊರತು ಉಪ್ಪಿನಕಾಯಿಯೇ ಊಟ ಆಗಬಾರದು.ಅದನ್ನು ಈಗಲಾದರೂ ಈ ನಿರುದ್ದೆಶಕರು ಅರ್ಥ ಮಾಡಿಕೊಲ್ಲಬೇಕು......

Comments

Submitted by makara Thu, 09/05/2013 - 04:48

ನಿಮ್ಮ ಮಾತು ನಿಜ, ಮೊದಲು ಈ ತೆಲುಗು ತುಷ್ಟೀಕರಣ ನಿಲ್ಲಬೇಕು. ಟಿ.ವಿ. ೯ ಮತ್ತು ಸುವರ್ಣ ನ್ಯೂಸ್ ಚಾನೆಲ್ಲುಗಳಲ್ಲಿ ಬಹುತೇಕ ತೆಲುಗು ಸಿನಿಮಾಗಳ ಗುಣಗಾನವೇ ಇರುತ್ತದೆ. ಇನ್ನು ಸುವರ್ಣ ಮತ್ತು ಈ ಟಿ.ವಿ.ಯ ಧಾರಾವಾಹಿಗಳಲ್ಲಿ ತೆಲುಗು ಸಿನಿಮಾಗಳ ಮ್ಯೂಜಿಕ್ಕನ್ನೇ ಕೊಡುತ್ತಿರುತ್ತಾರೆ. ಮೊದಲು ಇದರ ಕುರಿತು ಪ್ರತಿಭಟನೆ ಮಾಡಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಈಗಿರುವ ಕನ್ನಡ ವಾಹಿನಿಗಳು ಕನ್ನಡೇತರರವು; ನಿಜವಾದ ಕನ್ನಡ ಚಾನೆಲ್ಲು - ಹೆಸರಿಗೆ ಕಸ್ತೂರಿಯಷ್ಟೇ ಇದೆ. ಅದರಲ್ಲಿ ಬರುವ ಕಾರ್ಯಕ್ರಮಗಳೋ ದೇವರಿಗೇ ಪ್ರೀತಿ! ಸರಿಯಾಗಿ ಜನರ ನಾಡಿ ಮಿಡಿತವನ್ನು ಅರಿತುಕೊಂಡು ಆ ಚಾನೆಲ್ಲು ಕೆಲಸ ಮಾಡಬೇಕಿದೆ. ಎಲ್ಲಿಯವರೆಗೆ ಕನ್ನಡಿಗರು ಸ್ವಾಭಿಮಾನ ತೆಳೆಯುವುದಿಲ್ಲವೋ ಅಲ್ಲಿಯವರೆಗೆ ಪರಕೀಯರು ರಾಜಕೀಯವಾಗಿ, ಸಾಂಸ್ಕೃತಿವಾಗಿ ಮತ್ತು ಭಾಷೆಯ ಮೂಲಕವೂ ನಮ್ಮ ಮೇಲೆ ದಾಳಿ ಮಾಡುತ್ತಲೇ ಇರುತ್ತಾರೆ

ವೆಂಕಯ್ಯನಾಯ್ಡು, ಹೇಮಮಾಲಿನಿ, ಇವರನ್ನು ಪರೋಕ್ಷವಾಗಿ ರಾಜ್ಯಸಭೆಗೆ ಕಳಿಸಿದರೆ, ರೆಡ್ಡಿ ಸಹೋದರರು, ಕೃಷ್ಣಯ್ಯ ಶೆಟ್ಟಿ -ಮಾಲೂರು, ಇವರಿಗೆಲ್ಲಾ ನಾವು ರಾಜಕೀಯವಾಗಿ ನಮ್ಮ ಸ್ಥಾನ ಬಿಟ್ಟು ಕೊಟ್ಟಿಲ್ಲವೇ? ಇ‌ಲ್ಲೂ ಕನ್ನಡಿಗ ತನ್ನ ಸ್ಥಾನಮಾನ ರಕ್ಷಿಸಿಕೊಳ್ಳಲು ವಿಫಲನಾಗುತ್ತಿದ್ದಾನೆ :(( ವಿಧಾನ ಸಭೆಯಲ್ಲೇ ಮರಾಠಿ, ಇಂಗ್ಲೀಷುಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಭೂಪರಿರುವಾಗ ಅಲ್ಲೂ ನಾವು ರಾಜಕೀಯವಾಗಿ ಸೋತಿದ್ದೇವೆ ಎನಿಸುತ್ತಿಲ್ಲವೇ?