ಕರ್ನಾಟಕ ದೀಪವು ಬೆಳಗಲಿ
ಕವನ
ಕರ್ನಾಟಕ ದೀಪವು ಬೆಳಗಲಿ
ಕರ್ನಾಟಕ ದೀಪವು ಬೆಳಗಲಿ
ಕನ್ನಡ ಸುಪ್ರಭೆ ಹರಡಲಿ
ಜಗ ಚೇತನಗಳು ನೋಡಲಿ
ಈ ಘನ ಬೆಳಕೊಳಗಾಡಲಿ ||ಪ||
ಹಣತೆಗೆ ಎಣ್ಣೆ ಬತ್ತಿಗಳಾಗಲಿ
ನಮ್ಮೆಲ್ಲರ ತನು ಮನ ಗಣ
ಬೆಳಗಿದ ದೀಪವು ಆರದೆ ಇರಲಿ
ಕಾಯುತಿರಲಿ ಜನ ದಿನ ದಿನ ||೧||
ಹೊರ ಹೊಮ್ಮಲಿ ಬೆಳದಿಂಗಳಿನಂತೆ
ತಂಬೆಳರೆಲ್ಲೆಡೆ ಹಂಚಲಿ
ಹೊಸ ಹೊಸ ನಾಡಿನ ಗಡಿಗಳ ದಾಟಿ
ಕನ್ನಡಿಗರ ತನ ಮಿಂಚಲಿ ||೨||
ಓಡುತಲಿಹ ದಿಕ್ಕಿಲ್ಲದ ವೇಗಕೆ
ಕನ್ನಡಿಗರು ದಿಕ್ಕಾಗಲಿ
ದಿಕ್ಕು ದಿಕ್ಕುಗಳ ದಿಗ್ದರ್ಶನಕೆ
ಕನ್ನಡಿಗರು ಸಜ್ಜಾಗಲಿ ||೩||
ಹಣತೆಯೊಳೆಣ್ಣೆ ಬತ್ತದೆ ಇರಲಿ
ಬತ್ತಿಗಳೆಲ್ಲವೂ ಬೆಳಗಲಿ
ಬೆಳಗಿದ ಬೆಳ್ಳಂಬೆಳಕಿನ ಕಾಂತಿ
ವಿಶ್ವಕೆ ಶಾಂತಿಯನೆರೆಯಲಿ ||೪||
- ಸದಾನಂದ
Comments
ಉ: ಕರ್ನಾಟಕ ದೀಪವು ಬೆಳಗಲಿ
ಉ: ಕರ್ನಾಟಕ ದೀಪವು ಬೆಳಗಲಿ
In reply to ಉ: ಕರ್ನಾಟಕ ದೀಪವು ಬೆಳಗಲಿ by ananthaveera
ಉ: ಕರ್ನಾಟಕ ದೀಪವು ಬೆಳಗಲಿ
ಉ: ಕರ್ನಾಟಕ ದೀಪವು ಬೆಳಗಲಿ
In reply to ಉ: ಕರ್ನಾಟಕ ದೀಪವು ಬೆಳಗಲಿ by aneeshsharma
ಉ: ಕರ್ನಾಟಕ ದೀಪವು ಬೆಳಗಲಿ
ಉ: ಕರ್ನಾಟಕ ದೀಪವು ಬೆಳಗಲಿ
In reply to ಉ: ಕರ್ನಾಟಕ ದೀಪವು ಬೆಳಗಲಿ by raghumuliya
ಉ: ಕರ್ನಾಟಕ ದೀಪವು ಬೆಳಗಲಿ