ಕರ್ನಾಟಕ ದೀಪವು ಬೆಳಗಲಿ

ಕರ್ನಾಟಕ ದೀಪವು ಬೆಳಗಲಿ

ಕವನ
ಕರ್ನಾಟಕ ದೀಪವು ಬೆಳಗಲಿ


ಕರ್ನಾಟಕ ದೀಪವು ಬೆಳಗಲಿ
ಕನ್ನಡ ಸುಪ್ರಭೆ ಹರಡಲಿ
ಜಗ ಚೇತನಗಳು ನೋಡಲಿ
ಈ ಘನ ಬೆಳಕೊಳಗಾಡಲಿ ||ಪ||

ಹಣತೆಗೆ ಎಣ್ಣೆ ಬತ್ತಿಗಳಾಗಲಿ
ನಮ್ಮೆಲ್ಲರ ತನು ಮನ ಗಣ
ಬೆಳಗಿದ ದೀಪವು ಆರದೆ ಇರಲಿ
ಕಾಯುತಿರಲಿ ಜನ ದಿನ ದಿನ ||೧||

ಹೊರ ಹೊಮ್ಮಲಿ ಬೆಳದಿಂಗಳಿನಂತೆ
ತಂಬೆಳರೆಲ್ಲೆಡೆ ಹಂಚಲಿ
ಹೊಸ ಹೊಸ ನಾಡಿನ ಗಡಿಗಳ ದಾಟಿ
ಕನ್ನಡಿಗರ ತನ ಮಿಂಚಲಿ ||೨||

ಓಡುತಲಿಹ ದಿಕ್ಕಿಲ್ಲದ ವೇಗಕೆ
ಕನ್ನಡಿಗರು ದಿಕ್ಕಾಗಲಿ
ದಿಕ್ಕು ದಿಕ್ಕುಗಳ ದಿಗ್ದರ್ಶನಕೆ
ಕನ್ನಡಿಗರು ಸಜ್ಜಾಗಲಿ ||೩||

ಹಣತೆಯೊಳೆಣ್ಣೆ ಬತ್ತದೆ ಇರಲಿ
ಬತ್ತಿಗಳೆಲ್ಲವೂ ಬೆಳಗಲಿ
ಬೆಳಗಿದ ಬೆಳ್ಳಂಬೆಳಕಿನ ಕಾಂತಿ
ವಿಶ್ವಕೆ ಶಾಂತಿಯನೆರೆಯಲಿ ||೪||


                                                                             - ಸದಾನಂದ

Comments