ಕಲಬೆರಕೆ

ಕಲಬೆರಕೆ

ಸಾಯಬೇಕಾದ ಇಲಿ ಸಾಯುತ್ತಿಲ್ಲ, ಬದುಕಬೇಕಾದ ಜನ ಬದುಕುತ್ತಿಲ್ಲ, ಇದು ಕಲಬೆರಕೆಯ ಪರಿಣಾಮದ ಸ್ಥೂಲ ಚಿತ್ರಣ.  ಕೇವಲ ಲಾಡು, ಸಾಮಗ್ರಿ, ಸರಕುಗಳ ಕಲಬೆರಕೆ ಮಾತ್ರವಲ್ಲದೆ, ಹೇಗೆ ಜೀವನದ ಎಲ್ಲಾ ರಂಗಗಳಲ್ಲೂ ಕಲಬೆರಕೆ ಮಿತಿಮೀರಿದೆ ಎಂದು ವಿವರಿಸಿದ್ದಾರೆ. ರಾಜಕೀಯ ಪ್ರಜ್ಞೆ, ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿ, ಪ್ರತಿಯೊಂದು ಕ್ಷೇತ್ರದಲ್ಲೂ ಕಲಬೆರಕೆ ಸರಿಪಡಿಸಲಾಗದಷ್ಟು ಹದಗೆಟ್ಟಿದೆ. ಸರಿಪಡಿಸಬೇಕಾದ ಮನಸ್ಥಿತಿ ಇರಬೇಕಾದವರ ಮನಸ್ಥಿತಿಯೇ ಕಲಬೆರಕೆ ಆಗಿರುವಾಗ, ಅದರ ತಡೆ, ನಿರ್ಮೂಲನೆ, ಕೇವಲ ಕಾಗದದ ಮೇಲೆ ಅಥವಾ ದಾಖಲೆಗಳಲ್ಲಿ ಸಾಧ್ಯವೇ ಹೊರತು ವಾಸ್ತವವಾಗಿ ಅಸಾಧ್ಯದ ಮಾತು. ಈಗಿನಿಂದ ಪ್ರಾಮಾಣಿಕ ಪ್ರಯತ್ನ ಪ್ರಾರಂಭಿಸಿದರೂ ಇದರ ನಿರ್ಮೂಲನೆ ಮಾಡಲು ಕನಿಷ್ಠ ಅರ್ಧ ಶತಮಾನ ಬೇಕಾಗಬಹುದು. ಆದರೆ ಲೇಖಕರ ಸಲಹೆಗಳಾದ ಆಡಳಿತ ವ್ಯವಸ್ಥೆಯ ಶುದ್ಧೀಕರಣ, ಸಾಂವಿಧಾನಿಕ ಪ್ರಜ್ಞೆ, ಸಾಮಾಜಿಕ ನೈತಿಕತೆ, ಜವಾಬ್ದಾರಿ ಇವೆಲ್ಲ ಇನ್ನು ಕೇವಲ ಕಥೆ ಕಾದಂಬರಿ ಕಾಣಬಹುದೇ ಹೊರತು ನಿಜ ಜೀವನದಲ್ಲಿ ಇವೆಲ್ಲಾ ಮರೀಚಿಕೆ. ಕಲಬೆರಕೆಯ ಆಹಾರ ಪದ್ಧತಿಗೆ ಒಗ್ಗಿ, ಅದರಿಂದ ಆಗುವ ದುಷ್ಪರಿಣಾಮಗಳ ನಿರ್ಮೂಲನೆಗೆ ಕಲಬೆರಕೆ ಔಷಧಿಗಳನ್ನು ಸೇವಿಸಿಕೊಂಡು, ಇರುವಷ್ಟು ದಿನ ಕಲಬರಕೆಯ ಮನಸ್ಥಿತಿಯಲ್ಲಿ ಬದುಕಿರುವುದೇ ಈಗಿನ ಪರಿಸ್ಥಿತಿಯಲ್ಲಿರುವ ಏಕೈಕ ಮಾರ್ಗ.