ಕಲ್ಲು ಕಂಬದ ಸ್ವಗತ

ಕಲ್ಲು ಕಂಬದ ಸ್ವಗತ

ಕವನ

  ಹಚ್ಚುತ್ತಾರೆ.....!

  ನನ್ನ ಮೈಗೆ...ತಮ್ಮ ಕೈಗಂಟಿದ

  ಕುಂಕುಮ, ದೀಪದೆಣ್ಣೆ...

   ಪಂಚಾಮೃತ ಕುಡಿದು...

   ಕೈಗೆ ....ಮೆತ್ತಿದ್ದೆಲ್ಲವನ್ನೂ.....!

  

    ಒಮ್ಮೊಮ್ಮೆ......

   ಮನದಲ್ಲಿಯೇ  ಕೊರಗುತ್ತೇನೆ..

      ಅಂದು.....

   " ಶಿಲ್ಪಿಯ  ಚಾಣದೇಟಿಗೆ......

    ಮೂರ್ತಿಯಾಗುವ ತಾಕತ್ತು...

     ನನ್ನೊಳಗಿದ್ದರೆ....!

     ಈ ....ದೇವಾಲಯದ ಕಂಬವಾಗುವ ಬದಲು

    ಎಲ್ಲರೂ....ಕೈಮುಗಿವ

    ಗರ್ಭಗುಡಿಯೊಳಗಿನ...

     ಮೂರ್ತಿಯಾಗಿರುತ್ತಿದ್ದೆ  ".....ಎಂದು.!

    -"ಮೈಯೊಡ್ಡಬೇಕು ....

     ಬದುಕಿನ ಕಷ್ಟಗಳ ಚಾಣದೇಟಿಗೆ .......

      ............ಮೂರ್ತಿಯಾಗಲು"!

Comments