ಕಾಪಾಡು ಸಿದ್ಧಿವಿನಾಯಕ
ಕವನ
ಮದವೂರ ಗಣಪತಿ ದಯೆದೋರು
ವರನೀಡು ನೀ
ಶ್ರೀಮದವೂರ ಗಣಪತಿ ದಯೆದೋರು||ಪ||
ಚರಣದೆ ಮಣಿದಿಹೆ ಜಗದೋದ್ದಾರನೆ
ಮಾಡುತಲಿರುವೆನು ನಿನ್ನಾರಾಧನೆ
ಕರಿಮುಖ ಗಣಪಗೆ ಭಕ್ತಿಯ ವಂದನೆ
ಮಾಡಿಸು ನನ್ನಲಿ ಉತ್ತಮ ಸಾಧನೆ
ಸಿದ್ಧಿಯ ಕರುಣಿಸು ಸಿದ್ಧಿವಿನಾಯಕ
ಬುದ್ಧಿಯ ಕರುಣಿಸು ಬುದ್ಧಿಪ್ರದಾಯಕ
ವಿದ್ಯೆಯ ಕರುಣಿಸು ವಿದ್ಯಾದಾಯಕ
ಸದ್ಗುಣ ಕರುಣಿಸು ಗಣಗಳ ನಾಯಕ||೧||
ಮೋದಕ ಪ್ರಿಯನಿಗೆ ಮೋದಕವಿರಿಸಿದೆ
ತುಪ್ಪದಿ ಮಾಡಿದ ಅಪ್ಪವನಿರಿಸಿದೆ
ಚಕ್ಕುಲಿ,ಉಂಡೆಯ ಇರಿಸಿದೆ ಮರೆಯದೆ
ಈ ಜಗದೊಡೆಯನೆ ಕಾವುದು ಪ್ರೇಮದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್