ಕಾಲದ ಬೇಡಿಕೆ
ಕವನ
ಬಿಸಿಲು ದುಃಖದಿಂದ ಸುಖದಲ್ಲಿದೆ
ಮನುಷ್ಯ ಮಾಡಿದ ಮಾಟ ಕಾರಣ
ಮಳೆ ಮುಳುಗಿಸುವ ತವಕದಲ್ಲಿದೆ
ದರಿದ್ರ ವಾತಾವರಣ ಕಾರಣ
ಚಳಿಯ ಬದುಕು ಬೇಡವಾಗಿದೆ!
ಹೀನತ್ವದ ಪರಮಾವಧಿಯಿಂದ
ಇಳೆಯ ರೀತಿ ದಿಕ್ಕು ಬದಲಿಸಿದೆ
ಅಸಹಜ ಕಸ ಕಡ್ಡಿಗಳಿಂದ!!?
ನೇಸರನ ತಾಪ ಮರೆತು ಹೋಗಲಿ
ಸುಖ ತುಂಬುವ ಸಹಜತೆಗೆ
ಮಳೆಯ ಭಯವು ನೀಗಿ ಇರಲಿ
ರೀತಿ ದರುಶನವಾಗುವ ವೇಳೆಗೆ
ಚಳಿಯ ಏರಿಳಿತ ಸರಿಯಾಗಲಿ
ಮರೆತು ಬಿಡುವ ಜನರಿಗೆ!!
ವಾತಾವರಣದಿ ಮನವು ಬೆಳಗಲಿ
ಸ್ಥಾನಪಲ್ಲಟ ಯಥಾ ಸ್ಥಿತಿಗೆ!!?
ಮಾನವ ರೂಪಗಳ ಭೀತಿಯಲ್ಲಿ
ಸ್ವಂತಿಕೆ ಬಿಟ್ಟು ಸಾಗದಿರಿ ದುಷ್ಟರೇ
ರುದ್ರಭೂಮಿ ಕರೆಯುವ ಮುನ್ನ
ತಿಳಿದು ತಿನ್ನಿ ಮನುಜರೇ
-ಎಂ.ಎ.ಮುಸ್ತಫಾ, ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
