ಕಾ.ವೀ.ಕೃಷ್ಣದಾಸ್ ಅವರ ‘ಹಾಯ್ಕು’ಗಳು

ಕಾ.ವೀ.ಕೃಷ್ಣದಾಸ್ ಅವರ ‘ಹಾಯ್ಕು’ಗಳು

ಕವನ

ಕಾಸಿದ್ದವರು

ಪಟ್ಟ ಗೆದ್ದರು;ಜನ

ಸೋತೇ ಬಿಟ್ಟರು!

***

ಕಾಲೆಳೆಯುತಾ

ಕಾಲ ಕಳೆಯಬೇಡಿ;

ಕಲೆತು ನೋಡಿ!

***

ನೀ ಕೊಟ್ಟ ಹೂವು

ಹಾವಾಗಬಾರದಿತ್ತು;

ಎದೆ ಇಬ್ಭಾಗ!

***

ಬೇರು ನಿತ್ಯವೂ

ಹೋರಾಡುವುದು; ಮರ

ಉಸಿರಾಡಲು!

- *ಕಾ.ವೀ.ಕೃಷ್ಣದಾಸ್*

 

ಚಿತ್ರ್