ಕಾವೇರಿ ನದಿಯ ಕುರಿತಾಗಿ

ಕಾವೇರಿ ನದಿಯ ಕುರಿತಾಗಿ

ಕಾವೇರಿ ವಿಚಾರವಾಗಿ ಒಂದು ಅಭಿಪ್ರಾಯ
೧. ನದಿ ಹುಟ್ಟಿ ಹರಿದು ಸಮುದ್ರ ಸೇರುವುದು ಪ್ರಾಕೃತಿಕ ಕ್ರಮ
೨. ನಾಗರೀಕತೆಗಳು ಇದನ್ನು ಅವಲಂಬಿಸಿವೆ. ಅಂತೆಯೇ ಅಸಂಖ್ಯ ಇತರೆ ಜೀವರಾಶಿಗಳು ಇದನ್ನು ಅವಲಂಬಿಸಿಯೇ ಬದುಕುತ್ತಿವೆ.
೩. ಈ ನದಿಯನ್ನು ಅಲ್ಲಲ್ಲಿ ಕೆರೆ-ಕೊಳ್ಳಗಳ ಮೂಲಕ ಶೇಖರಿಸಿಕೊಂಡು ಮುಂದಿನ ಸಹಜ ಹರಿವೆಗೆ ಅನುವು ಮಾಡಿಕೊಡುವುದು ಪ್ರಕೃತಿಯ ಸಹಜ ಕ್ರಿಯೆಗೆ ಸಹಕಾರಿ.
೪. ದೊಡ್ಡ ಆಣೆಕಟ್ಟನ್ನು ಕಟ್ಟಿ ಬಹುಭಾಗದ ನೀರನ್ನು ತಡೆದಾಗ ಅದು ಪ್ರಕೃತಿವಿರೋಧ. ಮಾತ್ರವಲ್ಲ ಮುಂದಿನ ಜೀವಕೋಟಿಗೆ ಬಗೆಯುವ

 ದ್ರೋಹ.
೫. ಈ ತಡೆಯೊಡ್ಡುವ ಕೆಲಸವನ್ನು ರಾಜ್ಯವಾಗಿ ಮಾಡಿದಾಗ ಸಹಜವಾಗಿ ಮುಂದಿನ ರಾಜ್ಯದ ತಕರಾರು ಸಹಜ.
೬. ಇದನ್ನು ನಿರ್ವಹಿಸಲು ಒಕ್ಕೂಟ ವ್ಯವಸ್ಥೆಯ ದೇಶದಲ್ಲಿ ಈಗಾಗಲೇ ಸಾಕಷ್ಟು ಯೋಚನೆ, ಪರಿಹಾರ ಸೂತ್ರ ಕಂಡುಕೊಳ್ಳಲಾಗಿದೆ. 
೭. ಈ ಸೂತ್ರಗಳನ್ನು ಒಪ್ಪಿಕೊಳ್ಳಲು ಯಾವುದಾದರೂ ಒಂದು ರಾಜ್ಯಕ್ಕೆ ತಕರಾರು ಇದ್ದೇ ಇದೆ. ಇರುತ್ತದೆ ಕೂಡ.
೮. ಈ ತಕರಾರಿನಲ್ಲಿ ಇತರೆ ಪ್ರಾಕೃತಿಕ ಜೀವಕೋಟಿಗಳ , ಸಮುದ್ರದ ಜಲಚರಗಳ ಕೂಗು ಯಾರಿಗೂ ಬೇಕಿಲ್ಲ. ಕೇಳುವುದೂ ಇಲ್ಲ. 
೯. ಸಮುದ್ರದ ಎಕಾಲಜಿಯಲ್ಲಿ ಹೀಗೆ ಪಶ್ಚಿಮಘ್ಹಟ್ಟದಿಂದ ಲವಣಗಳನ್ನು ಕೊಂಡೊಯ್ಯುವ ನದಿಗಳ ನೀರು ಅಲ್ಲಿನ ಜಲಚರಗಳಿಗೆ ಅತ್ಯವಶ್ಯಕ. 
೧೦. ಒಂದೊಮ್ಮೆ ಒಂದು ರಾಜ್ಯದ ನದಿ ಅವಲಂಬಿತ ರೈತರಿಗೆ ತಮ್ಮ ಬೆಳೆಗೆ ಒದಗಿಸಬೇಕಾದ ನೀರಿನ ಅವಶ್ಯಕತೆಯನ್ನು ಕಡಿಮೆ ಮಳೆಯಾದ ವರ್ಷಗಳಲ್ಲಿ ಒದಗಿಸಲು ಆಗದೇ ಇದ್ದಾಗ ಆ ಭಾಗದ ರೈತರಿಗೆ ಸರ್ಕಾರ ಸೂಕ್ತ ಆರ್ಥಿಕ ಪರಿಹಾರವನ್ನು ಒದಗಿಸಿದಲ್ಲಿ ಅನಾಹುತ ಆಗಬೇಕಿಲ್ಲ. 
೧೧. ಈ ನೀರನ್ನು ಅವಲಂಬಿಸಿದ ಪಟ್ಟಣಗಳು ಅಲ್ಲಿ ಬೀಳುವ ಮಳೆಯ ನೀರನ್ನು ಸೂಕ್ತವಾಗಿ ಸಂಗ್ರಹಿಸಿಕೊಂಡು ಬದುಕಲು ಸಾಧ್ಯ. 
೧೨. ಈ ಅನ್ಯಾಯದ ನೀರು ಸಂಗ್ರಹಣೆಯ ಕಾರ್ಯದ ಕಾರಣದಿಂದ ವಿನಾಕಾರಣ ಹುಟ್ಟಿಸಿಕೊಳ್ಳುವ ರಾಜ್ಯ-ರಾಜ್ಯ ಗಳ ನಡುವಿನ ದ್ವೇಶ ಅರ್ಥಹೀನ ಮಾತ್ರವಲ್ಲ ಅನಾಗರೀಕ ಬೆಳವಣಿಗೆ.

Comments

Submitted by adarsh Sat, 10/06/2012 - 23:47

ಲೇಖನ‌ ಬರೆದ ಶ್ರೀಧರ್ ರವರು ಕಾವೇರಿ ವಿಚಾರವಾಗಿ ಅಭಿಪ್ರಾಯ‌ ಬರೆದಿದ್ದಾರೆ ಆದರೆ ಕಾವೇರಿ ಬಗೆ ಅವರಿಗೆ ಪ್ರಾಥಮಿಕ‌ ಅರಿವು ಇಲ್ಲ 1 ದಿವಸ‌ ಬಂದ್ ಪ್ರಭಾವವಿರಬೇಕು ಇವರ‌ ಬರಹದಲ್ಲಿ ಕೋಪವಿದೆಯೆ ಹೊರತು ವಿಷಯವಿಲ್ಲ ನೀರು ಹಿಡಿದಿಡುವುದೆಂದರೆ ಎನು? ವಿನಾಕಾರಣ‌ ಕರ್ನಾಟಕ‌ ನೀರು ಬಿಡುತ್ತಿಲ್ಲ ಎನ್ನುವ‌ ಅಭಿಪ್ರಾಯವಿದ್ದಂತೆಯಿದೆ, ‍ ಇದು ಸರಿಯಲ್ಲ ಕಾವೇರಿ ಸದ್ಯಕ್ಕೆ ಈಗಿರುವ‌ ನೀರಿನ‌ ಮಟ್ಟದಲ್ಲಿ ಕೇವಲ‌ ಕುಡಿಯಲು ಬಳಸಬಹುದು ಅಷ್ಟೇ ದಸರಾ ಹಾಗು ದೀಪಾವಳಿಯಲ್ಲಿ ಮಳೆಯಾದರು ಈಗಿರುವ‌ ನಷ್ಟ ತುಂಬಬಹುದು ಹೊರತು it is not a case of cheating and certainly not snatching from tamilnadu open eyes n see u will realize the fact.
Submitted by venkatb83 Sun, 10/07/2012 - 17:10

In reply to by adarsh

" ಈ ತಕರಾರಿನಲ್ಲಿ ಇತರೆ ಪ್ರಾಕೃತಿಕ ಜೀವಕೋಟಿಗಳ , ಸಮುದ್ರದ ಜಲಚರಗಳ ಕೂಗು ಯಾರಿಗೂ ಬೇಕಿಲ್ಲ. ಕೇಳುವುದೂ ಇಲ್ಲ. ೯. ಸಮುದ್ರದ ಎಕಾಲಜಿಯಲ್ಲಿ ಹೀಗೆ ಪಶ್ಚಿಮಘ್ಹಟ್ಟದಿಂದ ಲವಣಗಳನ್ನು ಕೊಂಡೊಯ್ಯುವ ನದಿಗಳ ನೀರು ಅಲ್ಲಿನ ಜಲಚರಗಳಿಗೆ ಅತ್ಯವಶ್ಯಕ. ೧೦. ಒಂದೊಮ್ಮೆ ಒಂದು ರಾಜ್ಯದ ನದಿ ಅವಲಂಬಿತ ರೈತರಿಗೆ ತಮ್ಮ ಬೆಳೆಗೆ ಒದಗಿಸಬೇಕಾದ ನೀರಿನ ಅವಶ್ಯಕತೆಯನ್ನು ಕಡಿಮೆ ಮಳೆಯಾದ ವರ್ಷಗಳಲ್ಲಿ ಒದಗಿಸಲು ಆಗದೇ ಇದ್ದಾಗ ಆ ಭಾಗದ ರೈತರಿಗೆ ಸರ್ಕಾರ ಸೂಕ್ತ ಆರ್ಥಿಕ ಪರಿಹಾರವನ್ನು ಒದಗಿಸಿದಲ್ಲಿ ಅನಾಹುತ ಆಗಬೇಕಿಲ್ಲ. " ಈ ಮೇಲಿನ ಸಾಲುಗಳನ್ನು ನಾನೂ ಅನುಮೋದಿಸುತ್ತೇನೆ.... ಈ ತರಹದ ವಿಷಯಗಳಲ್ಲಿ ನೀರಿನ ರಾಜಕೀಯಕ್ಕಿಂತ ನೀರಿನ ಅವಶ್ಯಕತೆ -ಲಭ್ಯತೆ - ಮುಖ್ಯ... ಜನರ ಭಾವನೆಗಳ ಜೊತೆ ಚೆಲ್ಲಾಟವಾಡೋದು ಅನಾಹುತಕಾರಿ... ಇನ್ನು ಮುಂದೆ ನೀರಿಗಾಗಿಯೇ ಈ ಜಗದಲ್ಲಿ ಮಹಾ ಯುದ್ಧಾಗಲಿದೆ ಆಗಬಹುದು ಎಂದು ಯಾರೋ ಹಿಂದೆಯೇ ಹೇಳಿದ್ದು ಗೊತ್ತಲ್ಲ...!! ಶುಭವಾಗಲಿ.. ನನ್ನಿ \|
Submitted by ಗಣೇಶ Sun, 10/07/2012 - 23:50

In reply to by venkatb83

ನಾನು ಆದರ್ಶ್ ಅವರ ಪ್ರತಿಕ್ರಿಯೆಗೆ +೧ ಹಾಕಿದ್ದು, ನಮ್ಮ ಸಪ್ತಗಿರಿವಾಸಿಯವರ ಪ್ರತಿಕ್ರಿಯೆಯ ಕೆಳಗೆ ಬಂತು. >>> ಸಮುದ್ರದ ಜಲಚರಗಳ ಕೂಗು ಯಾರಿಗೂ ಬೇಕಿಲ್ಲ. ಕೇಳುವುದೂ ಇಲ್ಲ. ಬೆಂಗಳೂರಿಗರು ಕುಡಿಯಲು ನೀರಿಲ್ಲದೇ ಈಗಲೇ ಒದ್ದಾಡುತ್ತಿದ್ದಾರೆ..ಅವರ ಕೂಗು ಕೇಳಿಸುತ್ತಿಲ್ಲವಾ? ಸಮುದ್ರದ ಜಲಚರಗಳಿಗೆ ಪ.ಘಟ್ಟದ ಲವಣ ಬೇಕಂತಾ!? >>>ಕಡಿಮೆ ಮಳೆಯಾದ ವರ್ಷಗಳಲ್ಲಿ ಒದಗಿಸಲು ಆಗದೇ ಇದ್ದಾಗ ಆ ಭಾಗದ ರೈತರಿಗೆ ಸರ್ಕಾರ ಸೂಕ್ತ ಆರ್ಥಿಕ ಪರಿಹಾರವನ್ನು ಒದಗಿಸಿದಲ್ಲಿ ಅನಾಹುತ ಆಗಬೇಕಿಲ್ಲ. " :) :)