ಕಾವೇರಿ ನೀರಿನ ಸಮಸ್ಯೆ
ಕಾವೇರಿ ವಿಷಯ:- ನಾಲ್ಕು ರಾಜ್ಯಗಳು ವಿಸ್ತ್ರತ ಅಂಕಿ ಅಂಶ ಒದಗಿಸಿ ಉತ್ತಮ ವಾದ ಮಂಡಿಸಿದರೂ ಈ ತೀರ್ಪು ತಮಿಳು ನಾಡಿನಪರ ಏಕೆ? ನ್ಯಾಯಧಿಕರಣಕ್ಕೆ ಸಹಾಯಕ್ಕಿರುವ ಅಧಿಕಾರಿಗಳ ತಪ್ಪೆ. ನ್ಯಾಯಾಧಿಕರಣ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೋ? ಅಂತು ಕರ್ನಾಟಕಕ್ಕೆ ಹೆಚ್ಚಿನ ಅನ್ಯಾಯ ಆಗಿದೆ. ಇದಕ್ಕೆ ಪರಿಹಾರ ಕೇಂದ್ರ ಅಂತರ್ ರಾಜ್ಯ ನೀರು ಹಂಚಿಕೆಗೆ ಸಂಬಂಧ ಪಟ್ಟಂತೆ ಕಾನೂನು ರಚಿಸುವದು. ಸೂಕ್ತ ಜಲಮಾಪನ ವ್ಯವಸ್ಥೆ ಕಲ್ಪಿಸುವದು. ಅಲ್ಲಿ ಸಂಬಂಧ ಪಟ್ಟ ರಾಜ್ಯಗಳ ಅಧಿಕಾರಿಗಳನ್ನು ನೇಮಿಸುವದು. ಯಾವುದೇ ರಾಜ್ಯಕ್ಕೆ ತನ್ನ ನೀರಾವರಿ ಜಮೀನನ್ನು ಎಷ್ಟು ಬೇಕಾದರೂ ಅಭಿವೃದ್ಧಿ ಪಡಿಸುವ ಸ್ವಾತಂತ್ರ ಕೊಡುವದು. ಆದರೆ ಇದು ಅದರ ಪಾಲಿನ ನೀರಿಗೆ ಮಾನದಂಡ ವಗದಂತೆ ಕಾನೂನು ರೂಪಿಸುವದು. ಯಾವುದೇ ನದಿ ನೀರಿನ ಹಂಚಿಕೆಯಲ್ಲಿ ಆನೀರಿಗೆ ಆರಾಜ್ಯದ ಕೊಡುಗೆ, ಆರಾಜ್ಯದ ನೀರಾವರಿ ಪ್ರದೇಶದಲ್ಲಿ ನದಿ ಹರಿಯುವ ದೂರ ಮುಖ್ಯ ಪರಿಗಣನೆ ಆಗಬೇಕು.
ಇದರಿಂದ ಆಗುವ ಲಾಭ ಸಾಮಾನ್ಯ ವಾಗಿ ೬೦ ವರ್ಷದ ಸೈಕಲ್ ನಲ್ಲಿ ಕನಿಷ್ಟ ೨೦ ವರ್ಷ ಹೆಚ್ಚಿನ ಮಳೆ ಆಗುತ್ತದೆ. ಆಗ ನದಿ ನೀರು ಸಮುದ್ರ ಸೇರಿ ಹಾಳಾಗುತ್ತದೆ. ಎಲ್ಲ ರಾಜ್ಯಗಳೂ ನೀರಾವರಿ ಜಮೀನನ್ನು ಅಭಿವೃದ್ಧಿ ಪಡಿಸಿ ಕೊಂಡಿದ್ದರೆ ಆ ೨೦ ವರ್ಷ ಉತ್ತಮ ಬೆಳೆ ತೆಗೆಯ ಬಹುದು. ಕಡಿಮೆ ನೀರಿರುವಾಗ ಒಣ ಬೆಳೆ ತೆಗೆಯುವದು ಇದ್ದೇ ಇದೆ. ಅದನ್ನು ಮುನ್ನೋಟ ದಂತೆ ಹಂಚಿಕೊಳ್ಳುವ ವ್ಯವಸ್ಥೆ ಇದ್ದರೆ ನಮ್ಮ ದೇಶಕ್ಕೆ ಹೆಚ್ಚಿನ ಲಾಭ. ಇದನ್ನು ಎಲ್ಲಾ ವಿದ್ಯಾವಂತರು,ಯುವಕರು ಪ್ರತಿಪಾದಿಸಿ ರಾಜಕೀಯ ಮುಖಂಡರಮೇಲೆ ಹೆಚ್ಚಿನ ಒತ್ತಡ ತಂದರೆ ಅವರು ಸ್ವಲ್ಪ ಬುದ್ಧಿ ಕಲಿಯ ಬಹುದು.
ಅನಂತ ಪಂಡಿತ