ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??

ಕಾಸರಗೋಡು ಕೇರಳಕ್ಕೆ ! ಆಯಿತು ! ಆದರೆ ಅಲ್ಲಿನ ನಿಜವಾದ ಕನ್ನಡಿಗರು ??

ಬರಹ


 'ಮಹಾರಾಷ್ಟ್ರಕ್ಕೆ ಬೆಳಗಾವಿ,ಕೇರಳಕ್ಕೆ ಕಾಸರಗೋಡು,ಕರ್ನಾಟಕಕ್ಕೆ...!? 


ಅಂತ ಗಡಿ ನಾಡ ಕನ್ನಡ ದ ಬಗ್ಗೆ  ರಾಕೇಶ್ ಶೆಟ್ಟಿ ಬರೆದ ಲೇಖನ  ಓದುತ್ತ ಓದುತ್ತ ಯಾಕೋ ನಾನು ಸಮಯ ದ ಗಾಡಿ ಹತ್ತಿ ಹಿಂದೆ ಹಿಂದೆ ಓಡತೊಡಗಿದೆ .


ನಾನು ಹುಟ್ಟಿ ಬೆಳೆದಿದ್ದು ಕರ್ನಾಟಕ ಕೇರಳ ಗಡಿ ಭಾಗ ದಲ್ಲಿ . ಹೌದು ನಮ್ಮ ಊರಲ್ಲಿ ಇನ್ನು ಕನ್ನಡವೇ ಜೀವಂತ !

೧೯೯೦ ರ ಸಮಯ ನಾನಾಗ ೫ ರ ಪೋರ . ಇನ್ನು ಚಡ್ಡಿ ಯ ದಾರವನ್ನು ಕಯ್ಯಲ್ಲಿ ಹಿಡಿದು ಅಮ್ಮಾ ಅಂತ ಓಡಾಡುವ ಪ್ರಾಯ. ನಮ್ಮಪ್ಪ ನನ್ನನ್ನು ಕರೆದೊಯ್ದು ನಮ್ಮ ಮನೆ ಪಕ್ಕದಲ್ಲಿದ್ದ ಕನ್ನಡ ಶಾಲೆಗೆ ಸೇರಿಸಿದರು. ಆಂಗ್ಲ ಮಾಧ್ಯಮದ ಹಾವಳಿ ಇಲ್ಲದ ಒಂದು ಪ್ರಶಾಂತ ಊರು ನಮ್ಮದ್ದು . ಆದರೆ ಆ ದಿನ , ಆ ಶಾಲೆಗೆ ಓದಲು ಅಂತ ಸೇರಿ ೧೦  ವರ್ಷಗಳ ನಂತರ ಕರ್ನಾಟಕದಲ್ಲಿ ಓದು ಮುಂದುವರಿಸಿ, ಮುಂದೆ ೨ ವರ್ಷಗಳ ನಂತರ  ೨೦೦೨ ರಲ್ಲಿ ಬೆಂಗಳೂರು ನಗರದಲ್ಲಿ ಕೂತಿರುವ ವಿದ್ಯಾಧಿಕಾರಿಯೋಬ್ಬರು ನನ್ನ ಪಕ್ಕ ಕರೆದು " ನೋಡು ಮರಿ ನೀನು ಕರ್ನಾಟಕ ದವನಲ್ಲ  ! ಹಾಗಾಗಿ ಕನ್ನಡ ಪರೀಕ್ಷೆ ಬರಿ ! ಪಾಸು ಮಾಡು ! ಮಾಡಿದ್ರೆ ಇಲ್ಲಿ ಕಲಿಬೋದು ನೀನು !! "  ಅಂತ ಹೇಳುತ್ತಾರೆ ಅಂತ ಊಹೆ ಕೂಡ ಇರಲಿಲ್ಲ ನನ್ನ ತಲೆಯಲ್ಲಿ !!!

 ಹೌದು......

 

 ನಾನೊಬ್ಬ ಗಡಿನಾಡ ಕನ್ನಡಿಗ . ೧೦ ನೆ ತರಗತಿಯವರೆಗೆ ಕನ್ನಡ ಮಾಧ್ಯಮದ ಒಂದು ಹಳ್ಳಿ ಶಾಲೆಯಲ್ಲಿ ಓದಿದವ ನಾನು. ನಮ್ಮೊರ ಜನಸಂಖ್ಯೆ ೫೦೦ ದಾಟಲ್ಲ! ನನಿಗೆ ಓದೋಕೆ ಕರ್ನಾಟಕದಲ್ಲಿ ಬಂದಾಗ , ಕನ್ನಡ ಅ , ಆ , ಇ, ಈ ಪರೀಕ್ಷೆ ಬರೆದು ' ಜನರಲ್ ಮೆರಿಟ್ ' ಸೀಟ್ ಲ್ಲಿ ಓದಿದವ . ನೆನಪಿಡಿ ಅಲ್ಲಿ ಕನ್ನಡ ಬಾರದ ಎಸ್ಟೊ ಮಕ್ಕಳು ಅದೇ ' ಜನರಲ್ ಮೆರಿಟ್ ' ನನ್ನ ಕಣ್ಣೆದುರೇ ಪಡೆದಿದ್ದಾರೆ. ನಾನು ಪೂರ್ಣ ಕನ್ನಡಿಗ . ನನಿಗೆ ಕನ್ನಡ quota  ಹಾಗು ಗ್ರಾಮೀಣ  quota  ಎರಡರಲ್ಲೂ ಮುಂಚೂಣಿಯ ಅರ್ಹತೆ ಇತ್ತು ನನ್ನನ್ನು ಕನ್ನಡಿಗ ಅಂತ ಪರಿಗನಿಸಿದ್ದರೆ !!( ಹಾಗೆ ನೆ ನಾನು ಕರ್ನಾಟಕದಲ್ಲಿ ಹತ್ತನೇ ತನಕ ಕಲಿಯಲ್ಲ ಅಂತ ಕೇರಳ ಕನ್ನಡ ಮಾಧ್ಯಮದಲ್ಲಿ ಓದಿದವನಲ್ಲ ! ಊರಲ್ಲಿ ಬೇರೆ ಶಾಲೆಗಲಿರಲಿಲ್ಲ ಅಸ್ತೆ !)    ಅದೇ ಪರೀಕ್ಷೆಯಲ್ಲಿ ಬೇರೆ ಬೇರೆ quota ಹಿಡಿದು ಒಲಾಡಿದ ಹುಡುಗರನ್ನು ನೋಡಿ ಸಣ್ಣಕ್ಕೆ ಬೇಜಾರು ಮಾಡಿಕೊಂಡವನು ನಾನು . ಆದರೆ ನಾನು ಅದೇ ಗ್ರಾಮ , ಅದೇ ಕನ್ನಡ ಶಾಲೆಗಳಲ್ಲಿ ( ನೆನಪಿಡಿ ! ಕೇರಳ ಕನ್ನಡ ಮಾಧ್ಯಮದ ಪಾಠಗಳು ಹಾಗು ಕೇಂದ್ರೀಯ ವಿದ್ಯಾಲಯ ದ ಪಾಠ ಗಳು ತುಮ್ಮ್ಬ ಸಾಮ್ಯತೆ ಇವೆ ! ) ಓದಿ ಒಳ್ಳೆಯ ಅಂಕಗಳನ್ನು ಗಳಿಸಿ , ಅನುಕಂಪ ದ ಯಾವುದೇ quota  ಇಲ್ಲದೆ ನೆ ಓದಿದವನು . ಆದರೆ ಎಲ್ಲರು ಹಾಗಲ್ಲ  ಅಲ್ಲವ . ನನ್ನ ಮಿತ್ರರೆಲ್ಲರೂ ಕೂತು ಬೈದಿದ್ದು ನಿಜ .

 

<<ಗಡಿನಾಡಿನಲ್ಲಿರುವ ಕಾರಣ ಕೇರಳ ಸರ್ಕಾರ ಅವರಿಗೆ ಅನೇಕ ಮೀಸಲಾತಿಯೂ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಜೊತೆಗೆ ಕಾಸರಗೋಡಿನವರ್‍ನು ಕನ್ನಡಿಗರು ಎಂದೇ ಕರ್ನಾಟಕದವರು ಒಪ್ಪುವುದರಿಂದ ಕರ್ನಾಕದಲ್ಲೂ ಅವರಿಗೆ ಸವಲತ್ತುಗಳಿವೆ. >> 
ಅಂತ ರಾಕೇಶ್ ಅವರ ಲೇಖನ ದ ಕೆಳಗೆ  ಮಿತ್ರ ಮಹಾಶಯರೊಬ್ಬರು ಬರೆದ ಕಾಮೆಂಟ್ ಓದಿದ ಮೇಲೆ , ಮನಸ್ಸು ಹೇಳಿತು ನನ್ನ ಹತ್ರ

 

ಪ್ರವೀಣ , ನೀನೂ ಕೇಳಪ್ಪ ಅವ್ರ ಹತ್ರ ಯಾವ ಸವಲತ್ತು ಇದೆ ಅಲ್ಲಿ ಹುಟ್ಟಿ ಬೆಳೆದವರಿಗೆ ? 

 

ಒಂದು ಮಾತು ನಿಜ , ಒಂದು ಮಗುವಿಗೆ ಒಳ್ಳೆಯ ಶಿಕ್ಷಣ ಕೊಡುವುದು ಮಾತ್ರ ಒಳ್ಳೆಯ ಸವಲತ್ತು ! ಆದರೆ ಅದೇ ಅಲ್ಲಿರುವ ಕನ್ನಡಿಗರಿಗೆ ಕುತ್ತಾಗಿದೆ ಈಗ ! ಅಲ್ಲಿ ಕನ್ನಡದಲ್ಲಿ ಓದಿದ ಮಕ್ಕಳು ಅಲ್ಲಿನ ಮಲಯಾಳೀ ಜನರಿಗೆ ತಾತ್ಸಾರ , ಹಾಗೇನೆ ಅವರು 'ನಮ್ಮವರಲ್ಲ ' ಅನ್ನುವ ರಾಜಕೀಯ 'ಅಧಿಕಾರದ್ದು' . ಆ ಕಡೆ ಅಲ್ಲೂ ಇಲ್ಲ , ಇಲ್ಲೂ ಕಷ್ಟ ಅನ್ನುವ ಜೀವನ ಅಲ್ಲಿಯ ಕನ್ನಡಿಗರದ್ದು ಈಗ . ಪರೀಕ್ಷೆಯ ಫಲಿತಾಂಶ ಅಗತ್ಯಕ್ಕಿಂತ ಜಾಸ್ತಿ ನಿಧಾನಿಸುತ್ತಾರೆ ( ಸ್ವಯಂ ಅನುಭವ ! ) , ಇಲ್ಲೇ ಓದಲಿ ಕಳ್ಳ ಭಡವ ಅಂತ ! ಅದೇ ಲೇಟ್ ಅದಾಗ್ಯೂ ಓಡಿ ಬರುವ ನನ್ನತಹ ಕನ್ನಡ ದ ಮಣ್ಣಿನ ಕಂಪು ಇರುವವರಿಗೆ ' ಲೇಟ್ ಆಯ್ತಪ್ಪ ' ಬಸ್ ಹೊರಟಿದೆ , ಮುಂದಿನ ವರ್ಷ ಪ್ರಯತ್ನಿಸಿ ಅಂತ ಹೇಳಿದ್ದು ಪುತ್ತೂರು PU College  ಸಂತ ಫಿಲೋಮಿನ ಕಾಲೇಜಿನ ಪ್ರಾಂಶುಪಾಲರು ! 

ಅಂದ ಹಾಗೆ ನನ್ನ ಹತ್ತನೇ ತರಗತಿ ಅನ್ಕಗಳಿದ್ದದ್ದು ಬರೇ ೯೩  % ! ಅದೋ  ಕೇರಳ ಕನ್ನಡ ಮಾಧ್ಯಮದಲ್ಲಿ !

ಒಹ್ ... ನಾನು ಲೇಟ್ ಆಗಿದ್ದು ಒಂದು ದಿನ !

 ಹೌದು !

 ಅಸ್ಟೇ ಅಲ್ಲ ! ಈ ಕಾಲೇಜಿನ ಆವರಣ ನನ್ನ ಮನೆ ಇಂದ ಹತ್ತು ಕಿ ಮಿ ಅಷ್ಟೇ !

 ನನ್ನ ಜೊತೆ ಹುಟ್ಟಿ ಬೆಳೆದು ಅಪ್ಪ ಅಮ್ಮ ನ ಹತ್ತಿರ ದುಡ್ಡಿದ್ದು ಕರ್ನಾಟಕದಲ್ಲಿ ಹತ್ತನೇ ತರಗತಿ ಯ ವರೆಗೆ ಓದಿ ೭೦ % ಅಂಕ ತೆಗೆದ ನನ್ನ ದೊಡ್ಡಪ್ಪ ನ ಮಗ ಸುಮ್ಮನೆ ಅಣಕ ನಗು ಬೀರಿದ್ದ , ನಾನು ಕಾಲೇಜಿನ ಅಂಗಣದಿಂದ ಹೊರ ನಡೆಯುವಾಗ !

 ನಿಜ ಹೇಳ್ತೆನೆ ಕೇಳಿ , 
 ಅಲ್ಲಿನ ಸವಲತ್ತು,  ಇಲ್ಲಿನ ಸವಲತ್ತು  ಅನುಭವಿಸಿ ಅಲ್ಲ ಅಲ್ಲಿನ  ' ನಮ್ಮ ಕನ್ನಡ' ದ ಮಕ್ಕಳು ಕನ್ನಡ ದ ಬಗ್ಗೆ ಬೇಸರಗೊಂಡಿದ್ದು !

ಆದರೆ .....

ಇಲ್ಲಿ ಬಂದಾಗ ದೊರೆತ ತಾರತಮ್ಯ ಗಳನ್ನು . ಇಲ್ಲಿ ಆಂಗ್ಲ ಮಾಧ್ಯಮ ದಲ್ಲಿ ಓದಿ , ಅ ಆ ಇ ಈ ಬಾರದ ಹುಡುಗರು " kannada barutte " ಅಂತ english  ಅಲ್ಲಿ ಹೇಳಿದ್ದಕ್ಕೆ ದೊರೆಯುವ ಸಾಲಲ್ಲಿ ಕೂತು ಹೊರಗೆ ಬಂದವ ನಾನು , ಅದೇ  COMMON ENTRANCE TEST 'ಸೆಲ್ ' ನಿಂದ  !  ಒಳಗೆ ಹೋಗುವಾಗ ಸಂಪಿಗೆ ರಸ್ತೆ , ಮಲ್ಲೇಶ್ವರ ನಮ್ಮ ಜನ  ಅಂತ ಎದ್ದು ಬಿದ್ದು ಓಡಿದವನಿಗೆ , ಹೊರ ಬರುವಾಗ ಯಾಕೋ ಕಣ್ಣು ನವೆ ಗಟ್ಟಿತ್ತು. ಹಾಗು ನಿಧಾನಕ್ಕೆ ನಮ್ಮೊರ ಬಸ್ಸು ಹತ್ತುವ ಅಸೆ ಜಾಸ್ತಿ ಆಗಿತ್ತು !   

 ಇದೊಂದು ಉದಾಹರಿಸಿದ್ದಷ್ಟೇ , ಈ ಥರ ಸಾವಿರ ಅನುಭವಗಳಾಗಿವೆ .....

  ನಾನು ಈ ಬಗ್ಗೆ ಜಾಸ್ತಿ ಬೇಸರ ಗೊಳ್ಳುವುದಿಲ್ಲ  !

ನಾನೊಬ್ಬ ದೇಶ ಕಟ್ಟುವ ಗುಂಪಿನವ , ಹಾಗಾಗಿ ಭಾಷೆಯ ಹೆಸರಲ್ಲಿ ಆದ ನೋವನ್ನು ಹೊಟ್ಟೆಗೆ ಹಾಕಿ ಎದ್ದು  ನಿಂತವ  ....

 

  ಒಂದು ದೇಶ ಅಂತ ಕಟ್ಟುವ ಹೊತ್ತಲ್ಲಿ ನನಿಗಾಗುವ ಚಿಕ್ಕಪುಟ್ಟ ನೋವುಗಳನ್ನು ಮರೆಯದಿದ್ದರೆ ನಾನೂ  ಒಬ್ಬ ದೇಶ ಕಟ್ಟುವ ಕನಸು ಕಾಣುವವನ   !

 

ಪ್ರೀತಿ ಇಂದ

 

ಪ್ರವೀಣ ಸಾಯ