ಕೆಂಡದ ದಾರಿಯ ಪಯಣ

ಕೆಂಡದ ದಾರಿಯ ಪಯಣ

ಬರಹ

ಕೆಂಡದ ದಾರಿಯ ಪಯಣ

ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ

ಹೆತ್ತವರಿಂದ ನಾ ದೂರವಾದೆ

ನಾ ಬೀದಿಯಲ್ಲಿ ಬಿದ್ದ ಕೂಸು

ದುಷ್ಟರ ಪಾಲಿಗೆ ನಾನಾದೆ ಬಲಿಪಶು

 

ಕೆಂಡದ ರಾಶಿಯೇ ನನಗೆ ಹೆದ್ದಾರಿ

ದುಃಖದ ಮಡುವೆ ಹಾಸಿಗೆಯಾಗಿ

ಹಸಿವಿನ ಬಾಧೆ ಕಣ್ಣೀರಾಗಿ

ಉಕ್ಕುತ್ತಿದೆ ಹೃದಯಾಳದಲ್ಲಿ

 

ನೋವಿನ ಕಥೆಯ ಕೇಳುವರಿಲ್ಲ

ಹೃದಯದ ಭಾವನೆ ಆಲಿಸುವರಿಲ್ಲ

ಮನದಲ್ಲಿ ನೂರಾರು ಕನಸುಗಳು

ಭಗ್ನವಾಗಿ ಕರಗುತ್ತಿವೆ  ಕಲ್ಪನಾ ದಿಗಂತದಿ

 

ಉಯ್ಯಾಲೆಯಾಗಿದೆ ನನ್ನಯ ಜೀವನ

ಸೂತ್ರವಿರದ ಗಾಳಿಪಟವಾಗಿ

ತೂಗಾಡುತ್ತಿದೆ ಬಿರುಗಾಳಿಗೆ ಸಿಕ್ಕಿ

 

ಹೃದಯದ ಭಾರ ಕರಗುವ ಆಲೋಚನೆ

ಬದುಕಿನ ಬವಣೆಯ ತೀರಿಸುವಲ್ಲಿ

ಅಂತ್ಯದ ಗಳಿಗೆಯ ಎಣಿಸುತ್ತಾ

ಹಗಲುಗನಸಿನ ಜಂಜಾಟದಲ್ಲಿ

ಮುಗಿಯುವುದೇ ನನ್ನ ಜೀವನ

         - ಮಾ.ಕೃ.ಮಂಜು