ಕೆಲವು ದ್ವಿಪದಿಗಳು
ಬರಹ
ಬಾಯಾರಿ ಬಂದಿಹೆನು ಬಲುದೂರದಿಂದ
ಸ್ವಲ್ಪವಾದರೂ ಪ್ರೀತಿಯ ಹನಿಸು ಕಂಗಳಿಂದ
ದಾರಿಯಲ್ಲೆಲ್ಲ ಕಲ್ಲು, ಮುಳ್ಳು, ಬಿಸಿಲು
ನೀ ನೆನಪಾದೊಡನೆ ಹೂ, ಮಕಮಲ್ಲು, ಬೆಳದಿಂಗಳು
ಮೊಗ ತುಂಬಿದ ಕೇಶರಾಶಿಯ ಸ್ವಲ್ಪ ಓಸರಿಸು
ಜಗವೆಲ್ಲ ತುಂಬಿಹುದು ಕತ್ತಲೆಯ ಮುನಿಸು
ಹೊಳೆವ ನಿನ್ನ ಮೊಗವನೆತ್ತಲು ಸಂಜೆಯಲಿ
ಸೂರ್ಯ ಕೂಡ ಮಂಕಾದ ಪಡುವಣದಲ್ಲಿ
ಸಾವು ಬಂದರೂ ನನಗೆ ಚಿಂತೆಯಿಲ್ಲ
ನಿನ್ನ ಚೆಲುವ ನೋಡಲು ಅದೂ ಜೊತೆಯಾಗುವುದಲ್ಲ
-ಸಿದ್ಧರಾಮ ಹಿರೇಮಠ. ಕೂಡ್ಲಿಗಿ