ಕೆಲಸ - ಮನಸ್ಸು !

Submitted by Nandish.H.B on Mon, 08/29/2011 - 14:07
ಬರಹ
ಕೆಲಸ - ಮನಸ್ಸು !   ಇಷ್ಟದ ಕೆಲಸ, ಕಷ್ಟವಾದರೂ ಮನಸಿಗೆ ತಿಳಿಯದು ಕಷ್ಟ ! ಒಲ್ಲದ ಕೆಲಸ, ಸುಲಭವಾದರೂ ಮನಸಿಗೆ ಕಾಣುವ ಕಷ್ಟ !   ಇಷ್ಟವೆಂಬ ಶಕ್ತಿ , ಮನಸ್ಸಿನಲ್ಲಿ ಭಕ್ತಿ - ಹಾಯೆನಿಸುವುದು ಆಯಾಸ ! ಕಷ್ಟವೆಂಬ ಮನಸ್ಥಿತಿ, ಮುದುಡಿದ ಮನಸ್ಸು - ಸಾಕೆನಿಸುವುದು ಆಯಾಸ !   ಕಾಯಕವೇ ಕೈಲಾಸವೆಂದ" ಹಿರಿಯರು ! ! ಕೈಲಾಗದು ಎನ್ನುವ ನಾವುಗಳು  ಇಷ್ಟ - ಕಷ್ಟಗಳು ಕೆಲಸದ ಗುಣಗಳಲ್ಲ, ಮನಸ್ಸಿನ ಸ್ಥಿತಿಗಳು !
"ಮನಸ್ಸಿದ್ದಲ್ಲಿ ಮಾರ್ಗ" ವೆಂಬುದ ನೆನೆದು ನಡೆ ಮುಂದೆ. ನಡೆ ಮುಂದೆ !                                                           - ನಂದೀಶ್ ಬಸವರಾಜು    

Comments