ಕೋಲಾಟದ ಪದ
ಕೋಲಾಟದ ಪದ
ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||
ಸುತ್ತ ಮುತ್ತ ಶರಧಿ ನೀರು
ಪಟ್ಟಣಕ್ಕೆ ದ್ವೀಪವೊಂದು
ಕೃಷ್ಣ ಸ್ವಾಮಿ ನೆಚ್ಚಿನಿಂದ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||೧||
ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||
ರುಕ್ಮೀಣೀಯ ಕೂಡಿಕೊಂಡು
ಅಕ್ಕ ಪಕ್ಕ ಪುರದ ದಂಡು
ಹಕ್ಕಿದೇರನರ್ತಿಯಿಂದ ಕೋಲನ್ನಾಡಿದ
ಕೋಲನ್ನಾಡಿದಾ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||೨||
ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||
ತುಂಬಿದಂಥ ಊರಮ್ಯಾಲೆ
ಅಂಬರದ ಚುಕ್ಕಿಗುಂಪು
ಸೇರಿಕೊಂಡೈತೆ, ಹೊಳೆದು ಊರ ಬೆಳಗೈತೆ
ಹರಿಯ, ತೊರೆಯಲಾರದೆ ತಾನು
ಬೆಳಗಿ ಕೊಂಡೈತೆ ||೩||
ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||
Comments
ಉ: ಕೋಲಾಟದ ಪದ
In reply to ಉ: ಕೋಲಾಟದ ಪದ by raghumuliya
ಉ: ಕೋಲಾಟದ ಪದ
ಉ: ಕೋಲಾಟದ ಪದ
In reply to ಉ: ಕೋಲಾಟದ ಪದ by nagarathnavina…
ಉ: ಕೋಲಾಟದ ಪದ