ಕೋಲಾಟದ ಪದ

ಕೋಲಾಟದ ಪದ

ಕವನ


ಕೋಲಾಟದ ಪದ




ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||

ಸುತ್ತ ಮುತ್ತ ಶರಧಿ ನೀರು
ಪಟ್ಟಣಕ್ಕೆ ದ್ವೀಪವೊಂದು
ಕೃಷ್ಣ ಸ್ವಾಮಿ ನೆಚ್ಚಿನಿಂದ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||೧||  

ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||

ರುಕ್ಮೀಣೀಯ ಕೂಡಿಕೊಂಡು
ಅಕ್ಕ ಪಕ್ಕ ಪುರದ ದಂಡು
ಹಕ್ಕಿದೇರನರ್ತಿಯಿಂದ ಕೋಲನ್ನಾಡಿದ
ಕೋಲನ್ನಾಡಿದಾ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||೨|| 

ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||

ತುಂಬಿದಂಥ ರಮ್ಯಾಲೆ 
ಅಂಬರದ ಚುಕ್ಕಿಗುಂಪು
ಸೇರಿಕೊಂಡೈತೆ, ಹೊಳೆದು ಊರ ಬೆಳಗೈತೆ
ಹರಿಯ, ತೊರೆಯಲಾರದೆ ತಾನು
ಬೆಳಗಿ ಕೊಂಡೈತೆ   ||೩||

ದ್ವಾರಕಾ ನಗರದಲ್ಲಿ ಕೋಲು ಕೋಲಣ್ಣ ಕೋಲೆ
ಚೆಲುವರಾಯ ಕೃಷ್ಣ ಸ್ವಾಮಿ ಕೋಲನ್ನಾಡಿದ
ಕೋಲನ್ನಾಡಿದಾ ಕೃಷ್ಣ ಕೋಲನ್ನಾಡಿದ
ಕೋಲನ್ನಾಡಿದಾ ದೇವ ಕೋಲನ್ನಾಡಿದ ||ಪ||


( ಹಳೆಯ ಜಾನಪದ ಕೋಲಾಟದ 'ಸುರಗೀ ಸುರಸಂಪಿಗೆ' ದಾಟಿಯಲ್ಲಿ ಬರೆದಿದ್ದೇನೆ. )        - ಸದಾನಂದ

Comments