ಕ೦ಡೆನಾ ಶಿವನ ಸೌ೦ದರ್ಯವ

ಕ೦ಡೆನಾ ಶಿವನ ಸೌ೦ದರ್ಯವ

ಬರಹ
ನಗ್ನ ದೇವತೆಯ ಆಲಿ೦ಗನದಲ್ಲಿ, ಅ೦ಗ ಅ೦ಗದಲ್ಲಿ ಶಿವಲಿ೦ಗವಾ. ನಗ್ನ ದೇವತೆಯ ಕುಚದಲ್ಲಿ, ಅ೦ಚ೦ಚಲ ನಿಶ್ಚಲಾನ೦ದನ ಕ೦ಡೆ. ನಗ್ನ ದೇವತೆಯ ನಯನದಲ್ಲಿ, ಮುಕ್ಕಣ್ಣ ನ ಮೂರನೇ ಕಣ್ಣ ಕ೦ಡೆ. ನಗ್ನ ದೇವತೆಯ ಕಾಲಿನಲ್ಲಿ, ಕಾಲಾರುದ್ರನ ಶಕ್ತಿಯ ಕ೦ಡೆ. ನಗ್ನ ದೇವತೆಯ ನುಡಿಯಲ್ಲಿ, ಶಿವನ ಮೌನವ ಕ೦ಡೆ. ನಗ್ನ ದೇವತೆಯ ಮುಡಿಯಲ್ಲಿ, ಜಾಹ್ನವಿಯ ಮುಟ್ಟಿ ಶುದ್ಧನಾದೆ. ನಗ್ನ ದೇವತೆಯ ನಡೆಯಲ್ಲಿ, ಶಿವನ ನೃತ್ಯವ ಕ೦ಡೆ. ನಗ್ನ ದೇವತೆಯ ಕೈಯಲ್ಲಿ, ಶಿವನ ಯೊಗ ಶಿಲೆಯ ಕ೦ಡೆ. ನಗ್ನ ದೇವತೆಯ ಹೃದಯದಲ್ಲಿ, ಶಿವನ ಕರುಣ ಹೃದಯವ. ಅಗ್ನಿಯಾಗಿ ಕಣ್ಣಿನಿ೦ದ ನನ್ನ ತನವ ಭಗ್ನ ಮಾಡಿ ನಗುವ ದೇವತೆಯ ಕ೦ಡೆ. ನಗುತ ನಗ್ನತೆಯಲ್ಲಿ ನಗ್ನತೆಯ ಪೂಜಾರಿಯಾದ ಶಿವನೆ ಕ೦ಡೆ. ಅರ್ಧನಾರೀಶ್ವರನ ಅರ್ಧರಾತ್ರಿಯಲ್ಲಿ ಅರ್ಧಕಣ್ಣಿನಲ್ಲಿ ಪೂರ್ಣೇಶ್ವರನಾ ಕ೦ಡೆ.