ಗೆಳತಿ

ಗೆಳತಿ

ಕವನ

ನಾ ಕಂಡ ಕನಸು ನನಸಾಗಲಿಲ್ಲ
ನಾ ಬಯಸಿದ್ದು ನನದಾಗಲಿಲ್ಲ
ಜೀವನವೆ ಶುನ್ಯ ಬರಿದಾಯಿತೆಲ್ಲ
ಮನಸು ಮುದುಡಿ ಮನದಲ್ಲೆ
ಮರೆಯಾಯಿತಲ್ಲ...

ಮರೆಯಾದ ಮನದಲಿ ಚಿಗುರೊಡೆದ ಭಾವ
ಆ ಚಿಗುರೆ ನೀ ಗೆಳತಿ ನೀ ನನ್ನ ಜೀವ
ನೀನಿರಲು ಜೊತೆ ನನ್ನ
ಹರುಷದಲಿ ಈ ಮನಸು
ಕನಸೆಲ್ಲ ನನಸು, ಜೀವನವೆ ಸೊಗಸು