ಗೋಪ ಕವಿ ಹೆಸರಿಸಿದ ಮರಗಳು

ಗೋಪ ಕವಿ ಹೆಸರಿಸಿದ ಮರಗಳು

Comments

ಬರಹ

ಹಾಲೆ ತಾಲಂಕೋಲೆ ದಿಂಡದುಂಡಿಗ ಬೋರೆ
ಜಾಲಿಯಾಲಂ ನೆಲ್ಲಿ ಬೆಲ್ಲವತ ಬೆಳಲಣಿಲೆ
ಬೇಲ ಸಾಲ ರುಟಾಳ ಬೋಳ ನವಿಲಾಡಿಯಿಬ್ಬಡಿ ಬಂಗರಳಿಯರಳಿಯು
ಹೂಲೆ ಹಾಲವಿ ಹುಣಿಸೆ ಹೊನ್ನೆ ಚನ್ನಂಗಿ ಕಂ
ಚಾಲ ಗೊಣ್ಯಾಲವಗರಗಿಲೆಲವ ಬೂರಾರ
ನೀಲಿ ಕುಲಿಚೇಲಿಯತ್ತಿಯು ತೋರಮತ್ತಿ ಪೇರುಪ್ಪೆ ತುಪ್ಪೆಗಳಿರ್ಪುವು||
ಹಾಲೆ= Mimosops kauki, Wrightia tinctoria
ತಾಲಂಕೋಲೆ=?
ಆಲ=Ficus bengalensis
ದಿಂಡ=Anogeissus latifolia
ದುಂಡಿಗ=?
ಬೋರೆ=jujube tree, Zizipus zizuba
ಜಾಲಿ=Acacia arabica,

ನೆಲ್ಲಿ=ಆಮಲಕ, Phyllanthum emblica
ಬೆಲ್ಲವತ=ಬಿಲ್ಪತ್ರ್ವೆ, ಬಿಲ್ವಪತ್ರೆ
ಬೆಳಲ್=Wood apple tree, Fernia elephantum
ಅಣಿಲೆ=ಅಳಲೆ, ಅಳಿಲೆ Terminalia chebula
ಅಗಿಲ್=ಕಾಡುಗಂಧ, Dysoxylum binectoriferum
ಅಗರ್=Balsam tree, Amyris agallocha
ಎಲವ=ಬೂರುಗದ ಜಾತಿಯ ಮರ, Bombax heptaphyllum
ಗೊಣ್ಯಾಲ=ಗೋಣಿಯಾಲ, Ficus mysorensis
ಸಾಲ=ತೇಗ
ರುಟಾಳ=?
ಬೋಳ=?
ನವಿಲಾಡಿ=Vitex nigunda
ಇಬ್ಬಡಿ=ಬೀಟೆ, Dalbergia latifolia
ಬಂಗರಳಿ=ಹೀಲ
ಅರಳಿ=Ficus religiosa
ಹೂಲೆ=Aeshynomene aspera
ಹಾಲವಿ=ಹಾಲುವಾಣ, Erythrina indica
ಹುಣಿಸೆ=ತಿಂತ್ರಿಣಿ, Tamarindus indica
ಹೊನ್ನೆ=Terminalia tomentosa
ಚನ್ನಂಗಿ=Largerstroemia parriflora
ಕಂಚಾಲ=ಕಾಂಚನಾರಕ, Bauhimia variegata
ಬೂರ=ಬೂರುಗ, Bombax malabarica
ಆರ=ನಿಚುಲ, Barringtona acutangala
ನೀಲಿ=Indigo shrub, Indigofera tinctorica
ಕೂಲಿ= Solanum jacquini (Shrub used for making sun hats)
ಚೇಲಿ=?
ಅತ್ತಿ=ಔದುಂಬರ, Ficus racemosa
ಮತ್ತಿ=Terminalia tomentosa
ಪೇರುಪ್ಪೆ=ಪುನರ್ಪುಳಿ, Garcinia gummigutta
ತುಪ್ಪೆ=?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet