ಚಕ್ಕುಲಿ

ಚಕ್ಕುಲಿ

ಬೇಕಿರುವ ಸಾಮಗ್ರಿ

ಹುರಿದ ಉದ್ದಿನಬೇಳೆಯ ಹಿಟ್ಟು ೧ ಕಪ್, ಅಕ್ಕಿ ಹಿಟ್ಟು ೪ ಕಪ್, ಬೆಣ್ಣೆ ಅಥವಾ ಕಾದ ಎಣ್ಣೆ ೩ ಚಮಚ, ಜೀರಿಗೆ ೧ ಚಮಚ, ಎಳ್ಳು ೧ ಚಮಚ, ಉಪ್ಪು ರುಚಿಗೆ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ

ಹುರಿದ ಉದ್ದಿನ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ ಅಥವಾ ಕಾದ ಎಣ್ಣೆ, ಉಪ್ಪು, ಜೀರಿಗೆ, ಎಳ್ಳು ಎಲ್ಲವನ್ನೂ ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಬೆರೆಸಿ. ನೀರು ಹಾಕಿ ಹದವಾಗಿ ಕಲಸಿ ಚಕ್ಕುಲಿ ಒರಳಿನಲ್ಲಿ ಹಾಕಿ ಎಣ್ಣೆ ಸವರಿದ ಬಾಳೆಲೆ ಅಥವಾ ಪ್ಲಾಸ್ಟಿಕ್ ಕವರ್ ಮೇಲೆ ಬೇಕಾದ ಅಳತೆಗೆ ಚಕ್ಕುಲಿ ಒತ್ತಿ. ಕಾದ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಕರಿಯಿರಿ.

- ಸಹನಾ ಕಾಂತಬೈಲು, ಮಡಿಕೇರಿ