ಚಳಿರಾಯನ ಮೋಡಿ

ಚಳಿರಾಯನ ಮೋಡಿ

ಬರಹ

 

ಬೆಳಗಿನಜಾವದಲಿ ಮೆತ್ತನೆಯ ಮುತ್ತಿಟ್ಟು

ಹೂಗಳನು ಎಬ್ಬಿಸುವ ಈ ನಿನ್ನ ಪರಿ,

ಕೊಮಲೆಯ ಮೈ ಸೋಕಿ ನಲ್ಲನನು ನೆನೆವಂತೆ ಮಾಡುವ

ಈ ನಿನ್ನ ರಸಿಕತೆ, ನಾಲ್ಕು ಮಾಸಗಳ ನಿರಂತರ ಕಥೆ.

ಪ್ರತಿ ವರುಷವೂ ನೀನು ಹೀಗೆ,

ಮಾಘಿಯ ಕಾಲದಲಿ ಮೈ ಜುಮ್ಮೆ ನಿಸಿ,

ಸುಗ್ಗಿಯಾ ಸಂಭ್ರಮ ಎಲ್ಲೆಲ್ಲೂ ಹಬ್ಬಿಸಿ

ಮದುವೆಯಾ ಹೆಣ್ಣಂತೆ ಬಾಗಿರುವ ತೆನೆಗಳಲಿ

ಮುಗುಳ್ನಗೆಯ ಮೂಡಿಸಿದ ಹಾಗೆ...

ಯಾರೋ ಹೀಗೆ, ಕಿವಿಯಲ್ಲಿ ಪಿಸುಗುಟ್ಟಿದ ಹಾಗೆ,

ಬೇಸಿಗೆಯ ಬಿಸಿಲಾದರು ಸಹಿಸೇನೂ... ಚಳಿಯನಾಗದುಯೆಂದು..

ಚಳಿಯನೋಡಿಸಲೆಂದು ಹೊದೆಯುವರು ನೂರಾರು,

ಶಾಲು, ಸ್ವೆಟರು ಮತ್ತಿನ್ನೇನೊ,

ಒಮ್ಮೆಯಾದರು ಚಳಿಗೆ ಮೈಯೊಡ್ಡಿ ನೋಡಿ,

ಆಗ ತಿಳಿವುದು ಅರಸಿಕನಿಗೊ ರಸಿಕತೆಯ ಮೋಡಿ.