ಚಾಲು ಮಾಲು!
ಕವನ
-1-
ಹುಚ್ಚು ಹುಡುಗಾ...!
ಆ ದೇವನೇ ಇಳೆಗೆ ಇಳಿದು ಬಂದು
ಸೀತೆಗೆ ರಾಮನಾದ,
ರಾಧೆಗೆ ಶ್ಯಾಮನಾದ!
ನಿನಗ್ಯಾತಕೋ ಈ ವಿರಾಗ ವಾದ!
ನೀನೀಗ...
ಆರಾಮವಾಗಿ ಇಲ್ಲಿ ವಿರಾಮವಾಗು
ಅಮರವಾಗಿಹ ಅನಂಗನಾಗು
ಈ ಸುಂದರಾಂಗಿ
ಅಂಗನೆಯ ಸಂಗಿಯಾಗು!
-ಮಾಲು
********
-2-
ಅವನು...
ಮರದ ಕೆಳಗೆ ಕುಳಿತ
ಬುದ್ದನಾದ ಪ್ರಬುದ್ಧನಾದ!
ಇವನು ಕೂಡ ಹಾಗೆ
ಅಲ್ಲೇ ಹಾಗೆ ಕುಳಿತ!
ಆದರೆ...
ಮರದ ಮೇಲೆ ಬರುವ
ಕಾಗೆ ಓಡಿಸುವುದರಲ್ಲಿ
ಮಗ್ನನಾದ ನಿಮಗ್ನನಾದ!
ಬುದ್ಧನಾಗದೆ ಕೊನೆಗೆ
ಒಬ್ಬ ಪೆದ್ದನಾದ!
-ಮಾಲು