ಚಾಲು ಮಾಲು!

ಚಾಲು ಮಾಲು!

ಕವನ

 

-1-
ಹುಚ್ಚು ಹುಡುಗಾ...!
ಆ ದೇವನೇ ಇಳೆಗೆ  ಇಳಿದು ಬಂದು 
ಸೀತೆಗೆ  ರಾಮನಾದ, 
ರಾಧೆಗೆ ಶ್ಯಾಮನಾದ!
ನಿನಗ್ಯಾತಕೋ ಈ ವಿರಾಗ ವಾದ!
ನೀನೀಗ...
ಆರಾಮವಾಗಿ ಇಲ್ಲಿ ವಿರಾಮವಾಗು
ಅಮರವಾಗಿಹ ಅನಂಗನಾಗು 
ಈ ಸುಂದರಾಂಗಿ 
ಅಂಗನೆಯ ಸಂಗಿಯಾಗು!
-ಮಾಲು 
********
-2-
ಅವನು...
ಮರದ ಕೆಳಗೆ ಕುಳಿತ 
ಬುದ್ದನಾದ ಪ್ರಬುದ್ಧನಾದ!
ಇವನು ಕೂಡ ಹಾಗೆ 
ಅಲ್ಲೇ ಹಾಗೆ ಕುಳಿತ!
ಆದರೆ...
ಮರದ ಮೇಲೆ ಬರುವ 
ಕಾಗೆ ಓಡಿಸುವುದರಲ್ಲಿ 
ಮಗ್ನನಾದ ನಿಮಗ್ನನಾದ!
ಬುದ್ಧನಾಗದೆ ಕೊನೆಗೆ 
ಒಬ್ಬ ಪೆದ್ದನಾದ!
-ಮಾಲು