'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಬರಹ

ಪುಸ್ತಕವೊಂದಕ್ಕೆ ಚೆಂದವಾದ ಮುಖಪುಟ ವಿನ್ಯಾಸ ನೀವೂ ಮಾಡಬಲ್ಲಿರಾ?

ನಾನು ಮಾಡುತ್ತೇನೆ, ಆದರೆ ಅದನ್ನು ನೋಡುವರಾರು ಎಂದು ಕೇಳಿದಿರೋ? ಛಂದ ಪುಸ್ತಕ ಕನ್ನಡದಲ್ಲಿ ತರುತ್ತಿರುವ ಪುಸ್ತಕಗಳು ಚೆಂದದ ಮುಖಪುಟ ವಿನ್ಯಾಸಗಳೊಂದಿಗೆ ಬರುತ್ತಿರುವುದಲ್ಲದೆ ಈಗ ಚೆಂದವಾಗಿ ವಿನ್ಯಾಸ ಮಾಡುವ ಎಲ್ಲರನ್ನೂ ಪ್ರೋತ್ಸಾಹಿಸಲು ಹೊರಟಿದೆ.

ಹೊಸಬಗೆಯ ಪುಸ್ತಕ ಮುಖಪುಟಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಛಂದಪುಸ್ತಕವು ‘ಛಂದ ಮುಖಪುಟ ವಿನ್ಯಾಸ" ಸ್ಪರ್ಧೆ ಏರ್ಪಡಿಸಿದೆ ಎನ್ನುತ್ತಾರೆ ಛಂದ ಪುಸ್ತಕದ ಹಿಂದಿರುವ ಬರಹಗಾರ ವಸುದೇಂದ್ರ. ಛಂದ ಪುಸ್ತಕದ ಮುಖಪುಟಗಳ ವಿನ್ಯಾಸ ರೆಡಿ ಮಾಡಿದ ಪತ್ರಕರ್ತ ರಘು ಅಪಾರ ಈಗ ಕನ್ನಡದಲ್ಲಿ ಬಹಳ ಡಿಮ್ಯಾಂಡಿನಲ್ಲಿರುವ  ಡಿಸೈನರುಗಳಲ್ಲೊಬ್ಬರು ಎನ್ನುವುದು ಇತಿಹಾಸ.

ಈಗ ನಿಮಗೂ ಅವಕಾಶವುಂಟು ಎನ್ನುತ್ತಾರೆ ಅಪಾರ. 

ಇದೇ ಡಿಸೆಂಬರ್ ನಲ್ಲಿ 'ಛಂದ' ಪ್ರಕಟಿಸಲಿರುವ ವಸುಧೇಂದ್ರರ ‘ಹಂಪಿ ಎಕ್ಸ್‌ಪ್ರೆಸ್" ಕಥಾಸಂಕಲನಕ್ಕೆ ನೀವೂ ಮುಖಪುಟ ರಚಿಸಬಹುದು! ಸಂಪದದ ಮೂಲಕ ಕಳುಹಿಸಲಾದ ಆಯ್ದ ಮುಖಪುಟಗಳನ್ನು ಸಂಪದದಲ್ಲೂ ಪ್ರಕಟಿಸಲಾಗುವುದಲ್ಲದೆ, ಆಯ್ದ ಪ್ರಯತ್ನಗಳಿಗೆ ಸಂಪದದ ಒಂದು ಟಿ-ಶರ್ಟ್ ಕೂಡ ಉಂಟು :-)

ಆಯ್ಕೆಗೊಂಡ ಒಂದು ವಿನ್ಯಾಸಕ್ಕೆ ಛಂದದ ವತಿಯಿಂದ 5000 ರೂ ಬಹುಮಾನ ನೀಡಲಾಗುವುದು. ಪುಸ್ತಕದ ವಸ್ತು ಬಳ್ಳಾರಿ ಹಾಗೂ ಬೆಂಗಳೂರಿನ ಪರಿಸರದಲ್ಲಿ ನಡೆಯುವ ಜೀವನಪ್ರೀತಿಯ ಕತೆಗಳು.

  • ಮುಖಪುಟ ವಿನ್ಯಾಸದ ಅಳತೆ: ಎತ್ತರ 22.5 ಸೆಮೀ, ಅಗಲ 14.5 ಸೆಮೀ.
  • (ಒಬ್ಬರು ಎಷ್ಟು ಬೇಕಾದರೂ ವಿನ್ಯಾಸಗಳನ್ನು ಕಳಿಸಬಹುದು)
  • ವಿನ್ಯಾಸಗಳನ್ನು ಇ-ಮೇಯ್ಲ್ ಮಾಡಬೇಕಾದ ವಿಳಾಸ: chanda@sampada.net
  • ಒರಿಜಿನಲ್ ವಿನ್ಯಾಸ 300dpi ರೆಸಲ್ಯೂಷನ್‌ನಲ್ಲಿರಬೇಕು, ಇ ಮೇಲ್ ಮಾಡುವಾಗ ರೆಸಲ್ಯೂಷನ್
    ಅನ್ನು 72ಕ್ಕೆ ಇಳಿಸಿ, ಜೆಪೆಗ್ ಫಾರ್ಮ್ಯಾಟ್‌ನಲ್ಲಿ ಕಳಿಸಬಹುದು. 
  • ಫೋಟೋಶಾಪ್, ಜಿಂಪ್ ನಲ್ಲಿ ಮಾಡಿರಲೇಬೇಕೆಂದೇನಿಲ್ಲ. ವಿನ್ಯಾಸ ಸ್ಕೆಚ್ ಕೂಡ ಆಗಬಹುದು.
  • ಕಡೆಯ ದಿನಾಂಕ: ಅಕ್ಟೋಬರ್ 20.
    (ಹೆಚ್ಚಿನ ವಿವರಗಳಿಗೆ 98444 22782 ಸಂಪರ್ಕಿಸಬಹುದು.)