ಜಾನಪದಶೈಲಿಯ ಗೀತೆ
ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ
ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ
ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ
ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡುಗಿಯ ಪಕ್ಕಕೆ ಬಂದು ನಿಂತಿತ್ತ "ಪ"
ಹುಡುಗನ ಕಂಡ ಹುಡುಗಿ ಬೆಚ್ಚಿ ದೂರ ಸರಿದಿತ್ತ
ಎಲೆಯ ಮರೆಯಲಿ ನಿಂತು ಹುಡುಗನ ಕದ್ದು ನೋಡತಿತ್ತ
ಹುಡುಗಿ ತೊಟ್ಟಿದ್ದ ಲಂಗ ದಾವಣಿ ಹುಡುಗನ ಮನದ ಕದವನ ತಟ್ಟಿತ್ತ "ಹ"
ಎದ್ದು ಬರುವಂತಿದ್ದ ಉಬ್ಬು-ತಗ್ಗಿಗೆ ಹುಡುಗನ ಮನವು ಉಬ್ಬಿ ಹೊಗಿತ್ತ
ಹುಡುಗನ ಕಣ್ಣು ಹುಡುಗಿಯ ಉದ್ದ ಅಗಲ ಲೆಕ್ಕ ಹಾಕತಿತ್ತ
ಅದನು ಕಂಡ ಹುಡುಗಿಯ ಕಾಲು ನೆಲದಿ ರಂಗೊಲಿ ಹಾಕತಿತ್ತ "ಹ"
ಬಾಯತೆರೆದು ಮಾತಾಡಲೊದ ಹುಡುಗನ ಗಂಟಲೆ ಹಿಡಿದಿತ್ತ
ಬಯದಲಿ ಹುಡುಗನ ಕೈಕಾಲು ನಡುಗಿತ್ತ
ತೊದಲುತ-ಅಂಜುತ ಹುಡುಗಿ ಕೈಯ ಹಿಡಿದಿತ್ತ
ಹಿತವಾಗಿ ಉಲಿದ ಹುಡುಗಿಯ ಕಂಡ ಹುಡುಗನ ಮನ ಮುದವಗೊಂಡಿತ್ತ "ಹ"
ಬಳ್ಳಿ ಮರವ ಬಳಸಿದಂತೆ ಹುಡುಗಿ ಹುಡುಗನ ಬಾಚಿತಬ್ಬಿತ್ತ
ನಾಚಿ ನಡುಗುತ ಮೆಲ್ಲನೆ ನಗುವ ಚಿಮ್ಮಿತ್ತಾ
ಪ್ರೀತಿಯು ಹೊಮ್ಮಿ ಹೊಳೆಯಾಗಿ ಹರಿದಿತ್ತಾ "ಹ"
_ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ