ಜೇನು ಹುಳು ಮತ್ತು ಹೂವು (ಮಕ್ಕಳ ಕವನ)

ಜೇನು ಹುಳು ಮತ್ತು ಹೂವು (ಮಕ್ಕಳ ಕವನ)

ಕವನ

ಜೇನು ಹುಳವು

ಹಾರಿ ಬಂದು

ಹೂವ ಮೇಲೆ ಕುಳಿತಿತು

ಹೀರು ನಳಿಕೆ

ಹೂವಲಿಳಿಸಿ

ಮಧುವನೆಲ್ಲ ಹೀರಿತು

ಹೊಟ್ಟೆ ತುಂಬಿ

ತೇಗು ಬರಲು

ಹೂವ ಜೊತೆಗೆ ಆಡಿತು

ಆಡಿ ಕುಣಿದು

ಹರುಷದಿಂದ

ಹಾರಿಕೊಂಡು ಹೋಯಿತು

-ಹಾ ಮ ಸತೀಶ

 

ಚಿತ್ರ್