ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು

ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು

ಬರಹ
ಝೆನ್‌ನ ಮಹಾನ್ ಗುರು ಚುಆಂಗ್ ತ್ಸು ಗೆ ಒಮ್ಮೆ ಕನಸು ಬಿತ್ತು. ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿಬಿಟ್ಟಿದ್ದ. ಅತ್ತಿತ್ತ ಹಾರಾಡುತ್ತಿದ್ದ. ಕನಸು ಇದ್ದಷ್ಟು ಹೊತ್ತೂ ಅವನಿಗೆ ತಾನು ಚುಆಂಗ್ ಎಂಬುದು ಗೊತ್ತೇ ಇರಲಿಲ್ಲ.
ಎಚ್ಚರವಾಯಿತು. ತಾನು ತನ್ನ ಕೋಣೆಯಲ್ಲಿ ಮಲಗಿರುವ ಚುಆನ್ ಎಂಬುದು ಮನಸ್ಸಿನಲ್ಲಿ ಮೂಡಿತು.
ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ ಇದು: “ಚಿಟ್ಟೆಯಾದಂತೆ ಕನಸು ಕಂಡವನು ನಾನೋ ಅಥವ ಚಿಟ್ಟೆ ಈಗ ನಾನು ಚುಆನ್ ಎಂಬ ಕನಸು ಕಾಣುತ್ತಿದೆಯೋ?”
[ನಾವು ಕಾಣುತ್ತಿರುವುದು ಕನಸನ್ನೋ, ನಿಜವನ್ನೋ, ಯಾರಿಗೆ ಗೊತ್ತು!]