ಡಿಸೆಂಬರ್ 30ರಂದು ಸಂಪದ ಸಮ್ಮಿಲನ

ಡಿಸೆಂಬರ್ 30ರಂದು ಸಂಪದ ಸಮ್ಮಿಲನ

ನಾಳೆಯ ಸಂಪದ ಸಮ್ಮಿಲನಕ್ಕೆ ಮಾರ್ಗಸೂಚಿ:

http://bit.ly/YWluz3
 
ಪ್ರಿಯ ಸಂಪದಿಗರೇ,

ಸಂಪದ ಪ್ರಾರಂಭವಾದದ್ದು ೨೦೦೫ರಲ್ಲಿ. ಆಗ ಅಂತರ್ಜಾಲದಲ್ಲಿ ನಡೆಯುತ್ತಿದ್ದ ಕನ್ನಡ ಸಂವಹನಕ್ಕೆ ಕಂಗ್ಲಿಷ್ ಬದಲು ಹೆಚ್ಚು ಹೆಚ್ಚಾಗಿ ಕನ್ನಡ ಬಳಕೆಯಾಗಬೇಕು ಎಂಬ ಉದ್ದೇಶ ಇಟ್ಟುಕೊಂಡು ಪ್ರಾರಂಭವಾದ ಒಂದು ಪ್ರಯೋಗ, ತದನಂತರದ ವರ್ಷಗಳಲ್ಲಿ ಸಾಹಿತ್ಯಾಸಕ್ತರಿಗೆ, ನವ ಬರಹಗಾರರಿಗೆ, ಕನ್ನಡ ಓದುಗರಿಗೆ ವೇದಿಕೆಯಾಗಿದೆ. ಸಂಪದದಿಂದ ಹೊಸ ಭರವಸೆ ಮೂಡಿಸುವ ಬರಹಗಾರರು ಬೆಳಕಿಗೆ ಬಂದಿದ್ದಾರೆ. ಇಲ್ಲಿ ಹಿರಿಯ ಬರಹಗಾರರು ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ. ‍ಮೂವತ್ತಾರು ಸಾವಿರ ಮುನ್ನೂರಕ್ಕೂ ಹೆಚ್ಚು ಪುಟಗಳಿರುವ, ಒಂದು ಲಕ್ಷ ‍ಎಪ್ಪತ್ತೇಳು ಸಾವಿರ ‍ಪ್ರತಿಕ್ರಿಯೆಗಳಿರುವ ಸಂಪದ ಜಗತ್ತಿನ ಅತಿ ದೊಡ್ಡ ಕನ್ನಡ ಅಂತರ್ಜಾಲ ತಾಣಗಳಲ್ಲೊಂದಾಗಿ ಬೆಳೆದಿದೆ.  ಏರಿಳಿತದ ದಾರಿಯಲ್ಲಿ ಏಳು ವರ್ಷಗಳನ್ನೇ ದಾಟಿದೆ! ‍


"ಕನ್ನಡ ಕೆಲಸವನ್ನು ಸಂಪದ 'ಎಲೆ ಮರೆಯ ಕಾಯಿಯಂತೆ' ನಿರ್ವಹಿಸುತ್ತಿದೆ, ತೀರ ಅಷ್ಟೂ ಮೌನ ಬೇಡ" ಎನ್ನುವುದು ಹಲವರ ಅಂಬೋಣ. ಈ ಮಾತಿಗೆ ಓಗೊಟ್ಟು ಈ ಬಾರಿ ಶಿವಪ್ರಕಾಶ ರೆಡ್ಡಿಯವರ ಉತ್ಸಾಹದ ಹೆಜ್ಜೆಗೆ ಪ್ರೋತ್ಸಾಹ ನೀಡುತ್ತ  
ಮತೊಮ್ಮೆ ಸಂಪದ ಸಮ್ಮಿಲನ ಆಯೋಜಿಸಿದ್ದೇವೆ.

ವರ್ಷಾಂತ್ಯದ ಭಾನುವಾರ, ಡಿಸೆಂಬರ್ 30-2012 ರಂದು, ಸಂಪದ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮ ನಡೆಯುವುದು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಮಂಗಳೂರಿನಿಂದ ಕೃಷಿ ಸಂಪದದ ಮೂಲಕ, ಇತ್ತೀಚೆಗೆ ಸಂಪದದ ಮೂಲಕವೇ ಚಿರಪರಿಚಿತರಾಗಿರುವ ಬರಹಗಾರ, ಅಂಕಣಕಾರ, ಅಡ್ಡೂರು ಕೃಷ್ಣರಾವ್ ಅವರು ನಮ್ಮೊಂದಿಗಿರುತ್ತಾರೆ. "ಬರವಣಿಗೆ ಹೇಗಿರಬೇಕು?" ಎಂಬುದರ ಕುರಿತು ಮಾತನಾಡಲಿದ್ದಾರೆ.

ಇದಲ್ಲದೆ, ಸಂಪದ ಈಗ ಕೆಲವು ಕಠಿಣ ಸವಾಲುಗಳನ್ನು ಎದುರಿಸುತ್ತಿದೆ. ಹೆಚ್ಚಿದ ಟ್ರಾಫಿಕ್ ನಿಂದಾಗಿ ಹೆಚ್ಚಿನ ಸಂಪನ್ಮೂಲದ ಅವಶ್ಯಕತೆ ಸಂಪದದ ಎದುರಿಗಿದೆ. ಜೊತೆಗೆ ಸಂಪದದಲ್ಲಿ ಸೇರಿಸಲಾಗುತ್ತಿರುವ ಕನ್ನಡದ ಬರಹಗಳಲ್ಲಿ ಎಲ್ಲವೂ ಎಷ್ಟು ಪ್ರಸ್ತುತ ಎನ್ನುವುದರ ಬಗ್ಗೆ ಪ್ರಶ್ನೆಗಳೂ ಬರುತ್ತಿವೆ. ಇವೆಲ್ಲದಕ್ಕೂ ಉತ್ತರ ಹುಡುಕುವ ಪ್ರಯತ್ನ ಮಾಡಲಿದ್ದೇವೆ.

ಕಾರ್ಯಕ್ರಮಗಳು: ಬೆಳಿಗ್ಗೆ ೧೦.೩೦ ಗಂಟೆಯಿಂದ ಪ್ರಾರಂಭ:

೧. ಪ್ರಾರ್ಥನೆ
೨. ಸಂಪದ ನಡೆದು ಬಂದ ದಾರಿ (ಹರಿಪ್ರಸಾದ್ ನಾಡಿಗ್, 20 ನಿಮಿಷ)
೩. ಸಂಪದದ ಮುಂದಿರುವ ಸವಾಲುಗಳು (30 ನಿಮಿಷ)
೪. ಸಂಪದಿಗರ ಪರಿಚಯ (30 ನಿಮಿಷ)
೬. ಬರವಣಿಗೆ ಹೇಗಿರಬೇಕು? (ಅಡ್ಡೂರು ಕೃಷ್ಣರಾವ್, 1 ಗಂಟೆ)
೭. ಸಮ್ಮಿಲನವನ್ನು ವಾರ್ಷಿಕ ಸಮ್ಮೇಳನವಾಗಿಸಬಹುದೇ? (ಚರ್ಚೆ-15 ನಿಮಿಷ)
೮. ವಂದನಾರ್ಪಣೆ

ಕಾರ್ಯಕ್ರಮದ ನಂತರ ಹಾಸ್ಯ ಬರಹ, ಕವನಗಳ ಕುರಿತು ಒಂ‍ದೊಂದು ಸುತ್ತಿನ ಪುಟ್ಟ ಕಾರ್ಯಕ್ರಮ ಕೂಡ ಇರುತ್ತದೆ. ಊಟ 'ನಮ್ಮೂರ ತಿಂಡಿ'ಯಿಂದ.

ಸಂಪದಿಗರೆಲ್ಲರಿಗೂ ಆತ್ಮೀಯ ಆಮಂತ್ರಣ. ಭಾಗವಹಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ.

ಸಂಪರ್ಕಿಸಿ:
ಶಿವಪ್ರಕಾಶ ರೆಡ್ಡಿ - 9900900114
ಬೆಲ್ಲಾಳ ಗೋಪಿನಾಥ ರಾವ್ - 9844701705


ಸ್ಥಳ:
'ಸಾರಂಗ' ಇನ್ಫೋಟೆಕ್ ಕಛೇರಿ,
ಭಾರತನಗರ, ವಿಶ್ವನೀಡಂ ಅಂಚೆ, ಬೆಂಗಳೂರು - ೯೧.
ನಕ್ಷೆ: http://www.saaranga.com/map

 

Comments

Submitted by venkatb83 Sat, 12/22/2012 - 18:21

ಸಂಪದ ಓಪನ್ ಆಗಿ-ಮೊದಲು ನೋಡಿದ್ದೇ -ಓದಿದ್ದೆ ಈ ಶುಭ ಸುದ್ಧಿ... ಸಂತಸದ ವಿಷ್ಯ,.. ಈ ಸಮ್ಮಿಲನಕ್ಕೆ ನಾ ಖಂಡಿತ ಬರುವೆ.. ಸಂಪದಿಗರು ಎಲ್ಲರನ್ನು ಒಂದೇ ಕಡೆ ನೋಡುವ ಈ ಅವಕಾಶ ಮತ್ತೆ ಮತ್ತೆ ಬರೋಲ್ಲವೆ ..>!! ಸರ್ವ ಸಂಪದಿಗರು ಬಂದು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವರು ಎಂಬ ನಂಬಿಕೆ ಇದೆ.. ಶುಭವಾಗಲಿ.. \|
Submitted by swara kamath Sat, 12/22/2012 - 20:34

ಸಂಪದಿಗರೊಂದಿಗೆ ಬೆರತು ಪರಸ್ಪರ ಅರಿಯಲು ಸಂಪದ ಸಾಹಿತ್ಯ ಸಮ್ಮಿಲನದ ಮೂಲಕ ಅನುವು ಮಾಡಿಕೊಟ್ಟ ಸಂಪದ ನಿರ್ವಾಹಕ ತಂಡದವರಿಗೆ ತುಂಬಾ ಧನ್ಯವಾದಗಳು.ನಾನು ಖಂಡಿತ ಸಂಪದಿಗರ ಸಮ್ಮಿಲನ ಕಾರಯಕ್ರಮಕ್ಕೆ ಬರಲು ಪ್ರಯತ್ನಿಸುತ್ತೇನೆ .ವಂದನೆಗಳು
Submitted by ಗಣೇಶ Sun, 12/23/2012 - 01:07

ಸಂಪದ ಸಮ್ಮಿಲನ ಸಂತಸದ ವಿಷಯ. >>>ಹೆಚ್ಚಿದ ಟ್ರಾಫಿಕ್ ನಿಂದಾಗಿ ಹೆಚ್ಚಿನ ಸಂಪನ್ಮೂಲದ ಅವಶ್ಯಕತೆ ಸಂಪದದ ಎದುರಿಗಿದೆ - ಸಾಧಕ ಬಾಧಕಗಳ ಬಗ್ಗೆ ನನಗರಿವಿಲ್ಲ. ಸಂಪನ್ಮೂಲಕ್ಕಾಗಿ ಎಲ್ಲಾ ಮಾಧ್ಯಮಗಳಂತೆ ಸಂಪದವೂ ಜಾಹಿರಾತಿಗೆ ಅವಕಾಶನೀಡಬಹುದಲ್ಲವಾ? -ಗಣೇಶ.
Submitted by hpn Thu, 12/27/2012 - 09:28

In reply to by ಗಣೇಶ

ಕಾಲಕ್ರಮೇಣ ಜಾಹಿರಾತಿಗೆ ಅವಕಾಶ ಕಲ್ಪಿಸುವ ಮಾತು ಇದೆ. ಆದರೆ ಜಾಹಿರಾತುಗಳನ್ನು ನಿರ್ವಹಿಸಲು ಸಂಪನ್ಮೂಲಗಳ ಅವಶ್ಯಕತೆಯಿದೆ. ಇತ್ತೀಚೆಗಷ್ಟೆ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬರಿಗೆ ಸಂಪದದ ಕೆಲಸದಲ್ಲಿ ಒಂದಷ್ಟನ್ನು ವಹಿಸಿಕೊಟ್ಟು ಕೆಲಸ ಕಲ್ಪಿಸಲಾಗಿದೆ. ಸದ್ಯಕ್ಕೆ ಇದರ ಖರ್ಚು ನಾನು ಸ್ವತಃ ಕೈಗೆತ್ತಿಕೊಂಡಿದ್ದೇನೆ. ಮುಂದೆ ಮತ್ತಷ್ಟು ಜನರಿಗೆ ಕೆಲಸ ಕಲ್ಪಿಸುವುದಷ್ಟೇ ಅಲ್ಲದೆ, ಜಾಹಿರಾತಿನಿಂದ ಇದರ ಖರ್ಚು ಭರಿಸುವ ಆಲೋಚನೆಯಿದೆ.
Submitted by kavinagaraj Sun, 12/23/2012 - 08:30

'ಸಂಪದ'ದ ಸಮ್ಮಿಲನ ಕಾರ್ಯಕ್ರಮವನ್ನು ಬೇರೆ ದಿನ ಮಾಡಬಾರದಿತ್ತೇ ಎಂದು ಹಳಹಳಿಸಿದೆ. ಅಂದೇ ನನ್ನ ತಮ್ಮನ ಮಗಳ ಮದುವೆಯಿರುವುದರಿಂದ ನನಗೆ ಬರಲು ಕಷ್ಟವಾಗಿದೆ. ನೆಚ್ಚಿನ ಮಿತ್ರರು, ಆತ್ಮೀಯರನ್ನು ಕಾಣುವ ಅವಕಾಶವಂಚಿತನಾಗುತ್ತಿರುವೆ. ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಶುಭ ಹಾರೈಕೆಗಳು. ಸಮ್ಮಿಲನದ ಹೊಣೆ ಹೊತ್ತವರಿಗೆ ಅಭಿನಂದನೆಗಳು. ಅಂದು ಕೈಗೊಳ್ಳಬಹುದಾದ ನಿರ್ಣಯಗಳಿಗೆ ನನ್ನ ಬೆಂಬಲವಿದೆ. -ಕ.ವೆಂ.ನಾಗರಾಜ್.
Submitted by Narayana Sun, 12/23/2012 - 10:40

ಪ್ರಿಯ‌ ನಾಡಿಗರೆ ಸಮ್ಮಿಲನ‌ ಚೆನ್ನಾಗಿ ನೆರವೇರಲಿ. ನಾನು ಕರ್ನಾಟಕದ‌ ಹೊರಗಿರುವುದರಿಮ್ದ‌ ಭಾಗವಹಿಸುವುದು ಅಶಕ್ಯ‌. ಸಮ್ಪದದ‌ ಬೆಳವಣಿಗೆಯನ್ನು ಕುತೂಹಲದಿಮ್ದ‌ ನೋಡುತ್ತಿರುವವರಲ್ಲಿ ನಾನೂ ಒಬ್ಬ‌. ಇದರ‌ ಸಾಧ್ಯತೆಗಳು ಅನಮ್ತ‌. ಹೀಗೇ ಬೆಳೆದು ಸಮಗ್ರ‌ ಕನ್ನಡಿಗರನ್ನು ಒಮ್ದುಗೂಡಿಸುವ‌ ವೇದಿಕೆಯಾಗಲಿ ಎಮ್ದು ಹಾರೈಕೆ. ನಾರಾಯಣ
Submitted by hpn Thu, 12/27/2012 - 09:19

In reply to by Narayana

ಸಂಪದದ ಮೇಲೆ ನೀವಿಟ್ಟಿರುವ ವಿಶ್ವಾಸಕ್ಕೆ ನಾನು ಋಣಿ. ಸಂಪದವನ್ನು ನಡೆಸಿಕೊಂಡು ಹೋಗುವಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಇದೆಲ್ಲವನ್ನೂ ಎದುರಿಸುತ್ತಿರುವ ಹಾದಿಯಲ್ಲಿ ನಮಗೆ ಮತ್ತಷ್ಟು ಪ್ರೋತ್ಸಾಹ, ಸ್ಪೂರ್ತಿ ತುಂಬಿದ್ದೀರಿ.
Submitted by sada samartha Sun, 12/23/2012 - 22:46

ದೂರದ ನನಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂಬ ಆಸೆಯಿದೆ. ಆದರೆ ಸಾಧ್ಯವಾಗುತ್ತಿಲ್ಲ. ಕ್ಷಮಿಸಿ. ಕಾರ್ಯಕ್ರಮ ಚೆನ್ನಾಗಿ ಆಗಲೆಂದು ಅಪೇಕ್ಷಿಸಿ ಹಾರೈಸುವೆ. - ಸದಾನಂದ
Submitted by viru Mon, 12/24/2012 - 12:15

ಸಂಪದ ಸಮ್ಮಿಲಿನ ವಾರ್ಷಿಕ ಕಾರ್ಯಕ್ರಮವು ಅರ್ಥಪೂರ್ಣವಾದುದು. ಕನ್ನಡ ನಾಡು ನುಡಿ ಸಂಸ್ಕೃತಿ ಬೆಳವಣಿಗೆಗೆ ಸಹಕಾರಿ. ನವನವ ಕವಿಗಳ ಪ್ರತಿಭೆಗಳ ಸೃಜಿಸುವುವಲ್ಲಿ ಕನ್ನಡದ ಜಾಲತಾಣ ಸಂಪದವು ಬಹು ಮುಖ್ಯ ಕೆಲಸ ನಿರ್ವಹಿಸುತ್ತಾ ಬಂದಿದೆ. ಈ ಎಲ್ಲಾ ಬೆಳವಣಿಗೆಯ ಅವಲೋಕನಕ್ಕಾಗಿ ಮತ್ತು ಮುಂದಿನ ಬೆಳವಣಿಗೆಗಾಗಿ ಸಂಪದ ಸಮ್ಮಿಲನ ವಾರ್ಷಿಕ ಕಾರ್ಯಕ್ರಮವು ಅವಶ್ಯಕವಾಗಿದೆ.
Submitted by Praveen.Kulkar… Wed, 12/26/2012 - 17:52

ಸಂಪದ ಸಮ್ಮಿಲನದ ಸುದ್ದಿ ಕೇಳಿ ಬಹಳ ಖುಷಿ ಆಯಿತು..ನಾನು ದೂರದ ಹೈದರಾಬಾದ್ನಲ್ಲಿ ಇರುವುದರಿಂದ ಇದರಲ್ಲಿ ಭಾಗವಹಿಸಲಾಗುವುದಿಲ್ಲ.ಆದರ ಸಹೃದಯಿ ಬಂಧುಗಳು ದಯವಿಟ್ಟು ಈ ಕಾರ್ಯಕ್ರಮದ ವೀಡಿಯೊ ಚಿತ್ರಣ youtube ನಲ್ಲಿ ಹಾಕಿದರೆ ನಾವು ದೂರದಿಂದಲೇ ನೋಡಬಹುದು...
Submitted by hariharapurasridhar Thu, 12/27/2012 - 07:26

In reply to by Praveen.Kulkar…

ಕವಿ ನಾಗರಾಜರ ಅನಿಸಿಕೆಯೇ ನನ್ನದೂ ಕೂಡ. ನಾಗರಾಜರ ತಮ್ಮನ ಮಗಳ ಮದುವೆ ಅಂದೇ ನಡೆಯಲಿದೆ. ಹೋಗದೆ ಇರುವಂತಿಲ್ಲ. ಸಂಪದಿಗರ ಮೊದಲ ಸಮಾವೇಶದ ನೆನಪುಗಳು ಇಂದೂ ಉಳಿದಿದೆ. ಈಗಿನ ಸಮಾವೇಶ ಯಶಸ್ವಿಯಾಗಲಿ. ನನ್ನದೊಂದು ಮನವಿ ಇದೆ. ಹಾಸನದಲ್ಲಿ ಒಂದು ಸಮಾವೇಶ ಮಾಡೋಣ.ಸರಳ ಊಟೋಪಚಾರದ ಹೊಣೆ ನನಗಿರಲಿ.ಇದು ನನ್ನ ವೈಯಕ್ತಿಕ ಆಹ್ವಾನವೆಂದು ಈಗ ನಡೆಯಲಿರುವ ಸಮಾವೇಶದಲ್ಲಿ ಚರ್ಚಿಸಬಹುದು. . ನಮ್ಮ ಮನೆಯಲ್ಲಿ 60-70 ಜನರು ಕುಳಿತುಕೊಳ್ಳಲನುವಾಗುವಂತಾ ಹಾಲ್ ಇದೆ. ಅದಕ್ಕೆ ನಿರಂತರ ವಿದ್ಯುತ್, ಮೈಕ್, ಅಂತರ್ಜಾಲ ಸೌಕರ್ಯವೂ ಇದೆ.ಹೇಗೂ ತಜ್ಞರು ಬರುತ್ತೀರಿ. ಆನ್ ಲೈನ್ ನಲ್ಲಿ ವಿಶ್ವದೆಲ್ಲೆಡೆ ಇರುವ ಸಂಪದಿಗರೊಡನೆ ಕಾನ್ಪ್ಫರೆನ್ಸ್ ಮಾಡೋಣ. ಏನಂತೀರಿ?
Submitted by hpn Thu, 12/27/2012 - 09:13

In reply to by hariharapurasridhar

ಶ್ರೀಧರ್, ಖಂಡಿತ ಆಗಬಹುದು. ೩೦ರ ಸಮ್ಮಿಲನ ಮುಗಿದ ನಂತರ ಕೋಲಾರದಲ್ಲೊಮ್ಮೆ ಮಾಡಬೇಕು ಎಂಬ ಕೋರಿಕೆಯಿದೆ. ತದನಂತರ ಹಾಸನದಲ್ಲೂ ಒಮ್ಮೆ ಎಲ್ಲರೂ ಸೇರಬಹುದು. ಹಾಸನಕ್ಕೆ ಬರಬೇಕು ಎಂದು ಎಣಿಸುತ್ತ ಒಂದು ವರ್ಷವೇ ಕಳೆದುಹೋಯಿತು. ಸಂಪದ ಸಮ್ಮಿಲನದ ನೆಪದಲ್ಲಿ ಬಂದು ಹೋಗೋಣವಂತೆ!
Submitted by spr03bt Sat, 12/29/2012 - 21:58

ಹಲವು ದಿನಗಳಿ೦ದ ಕಾತರವಾಗಿ ಎದುರು ನೋಡುತ್ತಿದ್ದ ಸ೦ಪದ ಸಮ್ಮಿಲನ ನಾಳೆಯೇ.. ಬನ್ನಿ ಸ೦ಪದಿಗರೆ ಎಲ್ಲರೂ ಒ೦ದೆಡೆ ಭೇಟಿಯಾಗೋಣ, ಸ೦ಪದದ ಇತಿಹಾಸದಲ್ಲಿ ಹೊಸದೊ೦ದು ಅಧ್ಯಾಯ ಶುರು ಮಾಡೋಣ
Submitted by Shobha Kaduvalli Sun, 12/30/2012 - 08:48

ಮಾನ್ಯರೇ, ಕನ್ನಡದ‌ ಕುರಿತು ತಮ್ಮ‌ ಕಾಳಜಿಯನ್ನು ಕ‌oಡು ಬಹಳ‌ ಸ‌oತೋಷವಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆoಬ ಆಸೆ ಕೈಗೂಡುತ್ತಿಲ್ಲ‌. ಕಾರ್ಯಕ್ರಮ‌ ಯಶಸ್ವಿಯಾಗಲಿ ಎoದು ಹಾರೈಸುತ್ತೇನೆ.
Submitted by swara kamath Sun, 12/30/2012 - 11:50

ಸಂಪದ ಸ್ನೇಹಿತ ಬಾಂಧವರೆ ನಮಸ್ಕಾರಗಳು. ನಾನು ಸಂಪದ ಕಾರ್ಯಕ್ರಮಕ್ಕೆ ಅತೀ ಉತ್ಸಕತೆಯಿಂದ ಹೊರಟ್ಟಿದ್ದೇನೊ ನಿಜ ಆದರೆ ಕುದರೆಮುಖ ಪ್ರವಾಸದಲ್ಲಿ ನನ್ನ ಪುತ್ರನು ರಿಪ್ಪನ್ ಪೇಟೆಗೆ ಬಂದು ನಮ್ಮನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವುದು ಒಂದುದಿನ ತಡವಾಗುವುದೆಂದು ತಿಳಿಸಿದ ಕಾರಣ ನನಗೆ ಕಾರ್ಯಕ್ರಮಕ್ಕೆ ಭಾಗವಹಿಸಿ ಮಿತ್ರರನೇಕರನ್ನು ನೋಡುವ ಅವಕಾಶ ತಪ್ಪಿಹೋದುದಕ್ಕೆ ಅತೀ ಬೇಸರ ವಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತೀರುವ ಎಲ್ಲರಿಗೂ ನನ್ನ ಶುಭಾಶಯಗಳು.............ರಮೇಶ ಕಾಮತ್.