ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !

ಡಿಸ್ನಿ ಲ್ಯಾಂಡ್,' ಗೆ ನೀವೇನಾದರೂ ಭೇಟಿ ಕೊಟ್ಟರೆ, ಜಲಾಂತರ್ಗಾಮಿ-ನೌಕಾಯಾನಗಳ (Submarines) ವಿಭಾಗವನ್ನು ನೋಡಲು, ಖಂಡಿತ ಮರೆಯದಿರಿ !

ಬರಹ

'ಕ್ಯಾಲಿಫೋರ್ನಿಯ" ರಾಜ್ಯದಲ್ಲಿ, ನಾವಿದ್ದ, 'ಆರೇಂಜ್ ಕೌಂಟಿ' ಯಿಂದ ’ಡಿಸ್ನಿ ಲ್ಯಾಂಡ್,’ ವಿಹಾರ ಸ್ಥಳ" ಕ್ಕೆ, ಕೇವಲ ೨೦ ನಿಮಿಷದ ಡ್ರೈವ್ ಮಾತ್ರ. ನಾವು ಬೆಳಿಗ್ಯೆ ೮-೩೦ ರ ಒಳಗೇ ಡಿಸ್ನಿ ಲ್ಯಾಂಡ್ ಮುಖದ್ವಾರದಲ್ಲಿ ಹಾಜರಿದ್ದೆವು. ಅದರಿಂದಾಗಿ ನಮಗೆ, ಅಲ್ಲಿನ ಹೆಚ್ಚು ಹೆಚ್ಚು ವಿಹಾರ ಸ್ಥಳಗಳನ್ನು ವೀಕ್ಷಿಸಲು ಅನುಕೂಲವಾಯಿತು! ನನ್ನ ಮೊಣ-ಕಾಲುಚಿಪ್ಪಿನ ನೋವಿನಿಂದಾಗಿ, ಸಬ್ಮೆರೀನ್ ತಾಣವನ್ನು ನೋಡಲು ನನಗೆ ಸಾಧ್ಯವಾಗಲಾರದೆಂದು ಭಾವಿಸಿದ್ದೆ. ಅಲ್ಲಿ ಕಾಯುವ ಸಮಯ ಹೆಚ್ಚಾಗಿತ್ತು. ಅದಲ್ಲದೆ, ಊಟದ ಸಮಯ ಬೇರೆ ! ಆದರೆ, ಅಲ್ಲಿನ ಜನರ ಸೌಹಾರ್ದತೆ, ಹಾಗೂ ಉಪಕಾರದ ಮನೋಭಾವಗಳಿಂದಾಗಿ, ನಾನೂ ನೋಡಲು ಸಾಧ್ಯವಾಯಿತು. ಲೈನ್ ನಲ್ಲಿ ನಿಲ್ಲಲಾಗಿದೆ, ನಾನು ದೂರದಲ್ಲಿ ಒಂದು ರೆಸ್ಟೋರೆಂಟ್ ನ ಕುರ್ಚಿಯಲ್ಲಿ ಕುಳಿತು, ವೀಕ್ಷಿಸುತ್ತಿದ್ದೆ. ಆದರೆ, ನನ್ನನ್ನು ಕ್ಯೂನಲ್ಲಿದ್ದ ಸಹ-ವೀಕ್ಷಕರು, ಕೂಗಿ ಕರೆದು, ಸ್ಥಳಾವಕಾಶವನ್ನು ಮಾಡಿಕೊಟ್ಟರು !

ಅಮೆರಿಕದ ನಾಗರಿಕರು, ಮಕ್ಕಳು, ಹೆಂಗಸರು, ಅಂಗವಿಕಲರು, ಹಾಗೂ ವರಿಷ್ಠನಾಗರಿಕರಿಗೆ ವಿಶೇಷ ಸಹಾಯಮಾಡಲು ಸದಾ ಸಿದ್ಧರಾಗಿರುತ್ತಾರೆ. ಅಂಗವಿಕಲರಂತೂ ಅಪ್ಪಿ-ತಪ್ಪಿ ವಿಧಿ ಅವರಿಗೆ ಮೋಸಮಾಡಿತೆಂಬ ಭಾವನೆಬರದಂತೆ, ಕಾಳಜಿವಹಿಸುತ್ತಾರೆ. ಇದೇನು ಉತ್ಪ್ರೇಷ್ಹೆಯಲ್ಲ ! ನಾವೇ ಕಣ್ಣಾರೆ ಕಂಡವಿಷಯ !

ವಾಲ್ಟ್ ಡಿಸ್ನಿ ಯವರ, 'ಡಿಸ್ನಿ ಲ್ಯಾಂಡ್ ವಿಹಾರ ಸ್ಥಳ,' ದ ಕಲ್ಪನೆ ಸಾಕಾರಗೊಂಡಿದ್ದು, ಕ್ಯಾಲಿಫೋರ್ನಿಯ ರಾಜ್ಯದಲ್ಲಿನ 'ಅನ್ಹಾನ್, ' ಊರಿನಲ್ಲಿ ಪ್ರಾರಂಭಿಸಿದಾಗ ! ಮನರಂಜನೆಯ ಈ ಹೊಸ ಆಯಾಮಗಳಬಗ್ಗೆ ವಿಶ್ವದಯಾವುದೇ ಮೂಲೆಯಲ್ಲೂ, ಯಾರೂ ಊಹಿಸಲಾಗದ ಅನೌಖಿಕ ಕಾರ್ಯವೈಖರಿಯನ್ನು ಬಳಕೆಗೆ ತಂದ ಕೀರ್ತಿ, 'ವಾಲ್ಟ್ ಡಿಸ್ನಿ,' ಯವರಿಗೆ ಸಲ್ಲಬೇಕು. ' ಡಿಸ್ನಿ ಲ್ಯಾಂಡ್,' ಈಗಾಗಲೇ ೨೦೦೫-೨೦೦೬ ರಲ್ಲಿ ತನ್ನ 'ಬಂಗಾರದ ಹಬ್ಬ' ವನ್ನು ಆಚರಿಸಿದೆ. ಪ್ರತಿವರ್ಷವೂ ಹೊಸ-ಹೊಸ ಮನರಂಜನೆಯ ಹೊಸ ಅಧ್ಯಾಯಗಳನ್ನು 'ಡಿಸ್ನಿ ಲ್ಯಾಂಡ್ ವಿಹಾರ ಸ್ಥಳ,' ಕ್ಕೆ ಜೋಡಿಸಲಾಗುತ್ತಿದೆ. ೧೯೫೯ ರಲ್ಲಿ ಶುರುವಾಗಿದ್ದ 'ಸಬ್ಮೆರೀನ್ ನೌಕಾಯಾನ,' ವನ್ನು, ಕಾರಣಾಂತರಗಳಿಂದ ೧೯೯೮ ರನಂತರ ಸಂಪೂರ್ಣವಾಗಿ ನಿಲ್ಲಿಸಲಾಗಿತ್ತು. ಆದರೆ, ಅದನ್ನು ಪುನಃ ೨೦೦೭ ರಲ್ಲಿ, ಪುನರ್ನಿಮಿಸಿ, ಹೊಸದಾಗಿ ಆರಂಭಿಸಿದ್ದಾರೆ. ಈ ಬಾರಿಯ ಥೀಮ್, 'Finding out NEMO,' ಎಂದು !

ಈಗ ಉಪಯೋಗದಲ್ಲಿರುವ ಸಬ್ಮೆರೀನ್ ನಾವೆ, ಯ ಆಕರ್ಷಣೆ, ಮೊದಲಿಗಿಂತ ನೂರುಪಟ್ಟು ಹೆಚ್ಚಾಗಿದೆ. ಚಲನಚಿತ್ರಗಳಲ್ಲಿ ತೋರಿಸುವಂತೆ, 'ಆಸ್ಟ್ರೇಲಿಯನ್ ಹಾರ್ಬರ್ ತತ್ವ,' ದ ಮೇಲೆ ಯಾನವನ್ನು ನಿಯಂತ್ರಿಸಿರುತ್ತಾರೆ. ಈ ಪುಟಾಣಿ ಸಬ್ಮೆರೀನ್ ಗಳನ್ನು ನಿರ್ಮಿಸಿರುವ ರೀತಿ ಅನನ್ಯವಾಗಿದೆ. ಇವು ನಿಜವಾಗಿಯೂ ನೀರಿನಲ್ಲಿ ಪೂರ್ಣವಾಗಿ ಮುಳುಗುವುದಿಲ್ಲ. ನೀರಿನ ಮಟ್ಟದ ಕೆಳಗೆ ಕಂಬಿಗಳಮೇಲೆ ಚಲಿಸುತ್ತವೆ. ಪ್ಯಾಸೆಂಜರ್ ಗಳು ಕುಳಿತಿರುವ 'ಡೆಕ್' ನ ಮಟ್ಟ ಕ್ಯಾಬಿನ್ ನೀರಿನಮಟ್ಟಕ್ಕಿಂತ ಕೆಳಗೆ. ಒಟ್ಟು ೪೦ ಸೀಟ್ ಗಳಿವೆ. ಸುಮಾರಾಗಿ ಪ್ರಯತ್ನಿಸಿದರೆ, ಇನ್ನೂ ಕೆಲವು ಸೀಟ್ ಗಳನ್ನು ನಾವೇ ಹೊಂದಿಸಿಕೊಂಡು ಕುಳಿತುಕೊಳ್ಳಬಹುದು. ಬೋರ್ಡ್ ಮೇಲೆ, ೪೬ ಆಸನಗಳನ್ನು ಎದುರು-ಬದರಿನಲ್ಲಿ ಹಾಕಿದ್ದಾರೆ. ಪ್ರತಿಆಸನದ ಮುಂದೆಯೂ ಒಂದು ಗಟ್ಟಿ-ಗಾಜಿನ ಕಿಟಕಿಯಿರುತ್ತದೆ. ಅದರಲ್ಲಿ ಕಡಲಿನ ಕೆಳಭಾಗದ ದೃಶ್ಯಗಳನ್ನು ಚೆನ್ನಾಗಿ ಕಾಣಬಹುದು. 'ಡ್ರೈವರ್ರೂ' ಸೇರಿದಂತೆ, ೪೫ ಜನ ಅತಿಥಿಗಳಿಗೆ ಸ್ಥಳಾವಕಾಶವಿದೆ.

'ಸಬ್ಮೆರೀನ್,' ನಾವೆಯ ಮೇಲ್ಭಾಗಕ್ಕೆ ಹಚ್ಚ ಹೊಸ, ಕಣ್ಣಿಗೆ ಥಳಥಳ ಹೊಳೆಯುತ್ತಿರುವಂತಹ, ಹಳದಿ ಬಣ್ಣ ಬಳಿದಿದ್ದಾರೆ. ಒಂದು ಗಾಢವಾದ ನೀಲಿ-ಕಪ್ಪುಬಣ್ಣದ ಪಟ್ಟಿ, ಸಬ್ಮೆರೀನ್ ನ ಮೇಲಿನ ಡೆಕ್ ಹಾಗೂ ನೀರಿನ ಮಟ್ಟವನ್ನು ಬೇರ್ಪಡಿಸುತ್ತದೆ. ಕೆಳಗಿನವರೆಗೆ, ಪ್ರತಿ ಸಬ್ಮೆರೀನ್ ನಲ್ಲೂ ನೀಲಿಬಣ್ಣದ ಸ್ಟ್ರಿಪ್ ಬಣ್ಣಬಳಿದಿದ್ದಾರೆ. ಆದರ ಒಳಭಾಗದ ಡೆಕ್ ನಲ್ಲಿನ ಛಾವಣಿಗೆ, ಒಳ, ಕ್ಯಾಬಿನ್ ಒಳಗೆ, 'ಡಾರ್ಕ್ ನೀಲಿ ಲೈನ್' ಗಳಿವೆ. ಸುತ್ತಲೂ. ಆವು ನೀರಿನ ಅಲೆಗಳನ್ನು ಬಿಂಬಿಸುವ ಕಡಲ ಪಯಣವನ್ನು ಪ್ರತಿಬಿಂಬಿಸುತ್ತವೆ.

ಮೆರಿನ್ ವೀಕ್ಷಣಾಲಯ, ' ಮೂ' ಪ್ರಯಾಣಿಕರಿಗೆ ಒದಗಿಸಲಾಗುತ್ತದೆ. ಅಂಗವಿಕಲರಿಗೆ, ಯಾರು ಮೆಟ್ಟಿಲನ್ನು ಇಳಿದು ಹತ್ತಲು ಸಾಧ್ಯವಿಲ್ಲವೊ ಅವರು, ಮೊದಲಿನ ಡೆಕ್ ನಲ್ಲಿಯೇ ವಿಶ್ರಮಿಸಬಹುದು. ಅವರಿಗೆ, ದೊರಕಿಸಿರುವ ಒಂದು 'ದೊಡ್ಡ ಪ್ಲಾಸ್ಮಾ ಪರದೆ,' ಸಬ್ಮೆರೀನ್ ಯಾನದ ಹಾದಿಯ ಎಲ್ಲಾದೃಷ್ಯಗಳನ್ನೂ ಕೂತಲ್ಲಿಯೇ ಅವಲೋಕಿಸಬಹುದು.

ಮೊದಲು ಸಬ್ಮೆರೀನ್ ಪಯಣದ ಯಂತ್ರಗಳನ್ನು ಡೈಸೆಲ್ ಎಂಜಿನ್ ಗಳನ್ನು ಅಳವಡಿಸಿ ನಿಯಂತ್ರಿಸಿದ್ದರು. ಈಗ, 'ಇಂಡಕ್ಟೀವ್ ಪವರ್ ಟ್ರಾನ್ಸ್ ಫರ್', ಯೆಂಬ ಹೊಸತಂತ್ರಜ್ಞಾನದಸಹಾಯದಿಂದ, ಕಾರ್ಯನಿರ್ವಹಿಸುತ್ತಿದ್ದಾರೆ. ಇದು, 'ಪಲ್ಯೂಶನ್' ಇಲ್ಲದ, 'ಪರಿಸರ ಪ್ರೇಮಿ ವ್ಯವಸ್ಥೆ'. ಸಬ್ಮೆರೀನ್ ಹಲವಾರು ಭಾಗಗಳನ್ನು ನಡೆಸಲು ಬೇಕಾದ ಯಾಂತ್ರಿಕ ನೆರವನ್ನು 'ಕಾಂಟ್ಯಾಕ್ಟ್ ಇಂಡಕ್ಷನ್ ಟೆಕ್ನಾಲೊಜಿ',' ಯೆಂಬ ಆಧುನಿಕ ಪದ್ಧತಿ, ಜವಾಬ್ದಾರಿಯಿಂದ ಹಾಗೂ ದಕ್ಷತೆಯಿಂದ ಕೆಲಸಮಾಡುತ್ತಿದೆ. ಹಲವಾರು ಎಲೆಕ್ಟ್ರಿಕ್ ಮೋಟಾರ್ ಗಳು ಇದರಿಂದ ಶಕ್ತಿ ಪಡೆದು ಯಂತ್ರಗಳ ನಿರ್ವಹಣೆಯನ್ನು ಮಾಡುತ್ತಿವೆ.

ಕೃತಕವಾಗಿ ನಿರ್ಮಿಸಿದ ಖಾಡಿಯ ಆಳವಾದ ನೀರಿನಮಟ್ಟದ ಕೆಳಗೆ ವೀಕ್ಷಕರು, ಇದಕ್ಕಾಗಿಯೇ ವಿಶೇಷ ತಯಾರುಮಾಡಿದ ಶಿಲ್ಪಗಳನ್ನು ನೋಡುತ್ತಿದ್ದರು. ಮೊದಲು. ಅಂಡರ್ ವಾಟರ್, ಚಿತ್ರಗಳು ನಮೂನೆಗಳು, 'ಸ್ತಬ್ಧಚಿತ್ರ' ['ಟ್ಯಾಬ್ಲ್ಯಾಕ್ಸ್'], ಲಗೂನ್ಸ್ ನಲ್ಲಿ ಮತ್ತು ಸಬ್ ಟೆರೇನ್ ಕಟ್ಟಡ ವಲಯಗಳಲ್ಲಿ, ಗುಹೆಯ ಭಾರಿದ್ವಾರವು ತೆರೆದುಕೊಂಡಾಗ, ಒಳಗೆ ನೀರಿನಲ್ಲಿ ಸುತ್ತಾಡುವ ಜಲಚರ ಪ್ರಾಣಿಗಳ ಓಡಾಟ, ಕಡಲಿನ ಒಳ-ನೀರಿನಲ್ಲಿ ಬೆಳೆಯುವ ಸಸ್ಯಗಳ ಒಂದು ವಿಸ್ಮಯ ಜಗತ್ತೇ ತೆರೆಯುತ್ತಾ ಹೋಗುತ್ತದೆ. ಆಷ್ಟ್ರೇಲಿಯದ ಬಳಿಯ ಗ್ರೇಟ್ ಬ್ಯಾರಿಯರ್ ರೀಫ್ ನ್ನು ನೆನಪಿಸುವ ಸಮುದ್ರದ ಒಳದಾರಿಯಲ್ಲಿ ಸ್ಥಾಪಿಸಿರುವ ಕೃತಕ ಸಸ್ಯ-ಸಾಮ್ರಾಜ್ಯವನ್ನು, ಅತ್ಯದ್ಭುತವಾಗಿ ನಿರ್ಮಿಸಿದ್ದಾರೆ. ಕೃತಕವಾದ ಜಲಚರ ಮೀನುಗಳೂ, ನೂರಾರುವಿಧದ ಕೋರಲ್ ಸಸ್ಯಸಂಪತ್ತು, ನಮ್ಮನ್ನು ದಿಗ್ಭ್ರಾಂತ ರನ್ನಾಗಿಯೂ, ಹುಚ್ಚರನ್ನಾಗಿಯೂ ಮಾಡುತ್ತವೆ. ಕಡಲಿನ ಕೆಳಗೆ ಸಾಗುವಾಗ, ಶುಭ್ರವಾದ ನೀರಿನಲ್ಲಿ ಎಲ್ಲವೂ ನಿಚ್ಚಳವಾಗಿ ಗೋಚರಿಸುತ್ತವೆ. ನೀರಿನಲ್ಲಿ ಕಲರ್ ಲೈಟ್ ವ್ಯವಸ್ಥೆ, ಪ್ರಯಾಣದುದ್ದಕ್ಕೂ ಇದೆ.

ಈಗಿನ ಹೊಸಪದ್ಧತಿಯಲ್ಲಿ, ಖಾಡಿಯ ನೀರಿನ ಕೆಳಗೆ, ಒಣಗಿದ ಸೀನರಿಗಳಿವೆ. 'ಪ್ಯಾನೆಲ್ ಆಫ್ ಪ್ಲೆಕ್ಸಿ ಗ್ಲಾಸ್,' (plexi glass) ಹಲಿಗೆಗಳ ಹಿಂಭಾಗದಲ್ಲಿವೆ. ಪಯಣಿಗರು, ಈ ಸನ್ನಿವೇಶಗಳ ಮಧ್ಯೆ,' ' water occupying the interstitial space' ಮತ್ತು , plexiglass' ಮಧ್ಯೆ ಸಬ್ಮೆರೀನ್ ನಲ್ಲಿ, ಹೊಗುತ್ತಾ, ಕಡಲಿನಲ್ಲಿ ಸ್ಥಾಪಿಸಿರುವ ಕೆಲವು 'ಆನಿಮೇಟೆಡ್ ಫಾರಮ್,' ಗಳನ್ನು ಅವಲೋಕಿಸಬಹುದು. 'ಸೀಕ್ವೆನ್ಸ್ ಆನಿಮೇಟೆಡ್,' ಪಾತ್ರಗಳನ್ನು, ಯಶಸ್ವಿಯಾಗಿ, ಪ್ರೊಜೆಕ್ಟ್ ಮಾಡಿದ್ದಾರೆ. 'ಸಿಲ್ಕ್ ಸ್ಕ್ರಿಮ್ಸ್ ' ಮೇಲೆ, ಕೃತಕವಾಗಿ ನಿರ್ಮಿಸಿದ, 'ಡ್ರೈ ಸೆಟ್' ಗಳನ್ನು ಕಂಡಾಗ. ನಮ್ಮ ನಾವೆ, ನಿಜವಾದ ದೈತ್ಯ-ಬಂಡೆಗಳ ಮಧ್ಯೆ ಹೋದಂತೆ ಭಾಸವಾಗುತ್ತದೆ. ಸಬ್ಮೆರೀನ್ ಧಾವಿಸುವ ಹಾದಿಯುದ್ದಕ್ಕೂ, ತರಹಾವರಿ, ಸಿಮ್ಯುಲೇಟೆಡ್ ಸಸ್ಯಗಳನ್ನು ಕಾಣಬಹುದು.

-ಚಿತ್ರ-ಪ್ರಕಾಶ್