ತಲೆ-ಹರಟೆ ಪ್ರಶ್ನೋತ್ತರ.
* ಮುತ್ತಿಗೂ ಮತ್ತಿಗೂ ಏನು ವ್ಯತ್ಯಾಸ?
ಒಂದುಕೊಂಬು ಅಷ್ಟೇ!
*ಬದುಕು ಜಟಕಾ ಬಂಡಿ ಎನ್ನುವ ಈ ಮಂದಿ ರಾಕೆಟ್ ವೇಗದಲ್ಲಿ ಸಾಗಿದ್ದರಲ್ಲ?
"ಜೆಟ್ ಕಾ ಬಂಡಿ " ಎಂದು ಬದಲಾಯಿಸಿ.
* ತಾಯಿಗಿಂತ ದೇವರಿಲ್ಲ, ಹೆಂಡತಿಗಿಂತ?
ಬಾಯಿ ಇಲ್ಲಾ .
*ಮದುವೆಯಾದ ಪ್ರತಿ ಗಂಡು ತನ್ನಲ್ಲೇ ಆಗಾಗ ಹೇಳಿಕೊಳ್ಳುವ, ಅಂದು ಕೊಳ್ಳುವ ಮಾತು ಯಾವುದು?
ಬೇಡರ ಕಣ್ಣಪ್ಪ ಚಿತ್ರದ ಹಾಡು " ಶಿವಪ್ಪ ಕಾಯೋ ತಂದೆ !"
* ಬೆಳಕು ಸೆಕೆಂಡಿಗೆ ಒಂದು ಲಕ್ಷ ಎಂಬತ್ತಾರು ಮೈಲಿ ಚಲಿಸುತ್ತದೆ. ಈ ವೇಗ ಏನು ಹೇಳುತ್ತದೆ?
ಆಕಾಶ " ಅಪ್ " ನಲ್ಲಿದೆ. ಭೂಮಿ " ಡೌನ್" ನಲ್ಲಿದೆ . ಅದಕ್ಕೆ ಸ್ಪೀಡ್ ಜಾಸ್ತಿ.
* ಹೆಂಡತಿ ಮನೆಯೊಳಗಿದ್ದರೆ ನನಗದು ಕೋಟಿ ರುಪಾಯಿ, ಗಂಡ ಮನೆಯೊಳಗಿದ್ದರೆ?
ಸಿಕ್ಕಿಹ ಬಡಪಾಯಿ!!
* ನೀವು ದೇವರನ್ನು ನೋಡಿದ್ದಿರಾ?
ನೋಡಿದ್ದೇನೆ! ಕ್ಯಾಲೆಂಡರಿನಲ್ಲಿ !!
* ಹೆಂಡತಿಯ ಮಾತನ್ನು ಕೇಳದಿದ್ದರೆ ಗಂಡನ ಕಥೆ ಏನಾಗುತ್ತದೆ?
ಕಥೆ? ಉಹುಂ ! ಕಾದಂಬರಿ ಆಗುತ್ತೆ!
* ರಾಮನು ಮರದ ಕೆಳಗೆ ಇದ್ದ. ಇದು ಯಾವ ಕಾಲವಾಗುತ್ತದೆ?
ರಾಮಾಯಣದ ಕಾಲ
* ಹೆಂಗಸರ ಮನಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅಲ್ಲವೇ?
ತುಂಬಾ ಕಷ್ಟ ಏನಿಲ್ಲ. ನೀವು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಆಕೆ ಮನಸನ್ನೇ ಬದಲಾಯಿಸಿರುತ್ತಾಳೆ , ಅಷ್ಟೇ!
Comments
ಉ: ತಲೆ-ಹರಟೆ ಪ್ರಶ್ನೋತ್ತರ.
In reply to ಉ: ತಲೆ-ಹರಟೆ ಪ್ರಶ್ನೋತ್ತರ. by nanjunda
ಉ: ತಲೆ-ಹರಟೆ ಪ್ರಶ್ನೋತ್ತರ.
ಉ: ತಲೆ-ಹರಟೆ ಪ್ರಶ್ನೋತ್ತರ.
In reply to ಉ: ತಲೆ-ಹರಟೆ ಪ್ರಶ್ನೋತ್ತರ. by makara
ಉ: ತಲೆ-ಹರಟೆ ಪ್ರಶ್ನೋತ್ತರ.
ಉ: ತಲೆ-ಹರಟೆ ಪ್ರಶ್ನೋತ್ತರ.
In reply to ಉ: ತಲೆ-ಹರಟೆ ಪ್ರಶ್ನೋತ್ತರ. by ಅನುರಾಗ್
ಉ: ತಲೆ-ಹರಟೆ ಪ್ರಶ್ನೋತ್ತರ.
ಉ: ತಲೆ-ಹರಟೆ ಪ್ರಶ್ನೋತ್ತರ.
In reply to ಉ: ತಲೆ-ಹರಟೆ ಪ್ರಶ್ನೋತ್ತರ. by Chikku123
ಉ: ತಲೆ-ಹರಟೆ ಪ್ರಶ್ನೋತ್ತರ.
ಉ: ತಲೆ-ಹರಟೆ ಪ್ರಶ್ನೋತ್ತರ.
In reply to ಉ: ತಲೆ-ಹರಟೆ ಪ್ರಶ್ನೋತ್ತರ. by kavinagaraj
ಉ: ತಲೆ-ಹರಟೆ ಪ್ರಶ್ನೋತ್ತರ.