ತಲೆ-ಹರಟೆ ಪ್ರಶ್ನೋತ್ತರ.

ತಲೆ-ಹರಟೆ ಪ್ರಶ್ನೋತ್ತರ.

 

 
* ಮುತ್ತಿಗೂ ಮತ್ತಿಗೂ ಏನು ವ್ಯತ್ಯಾಸ?
   ಒಂದುಕೊಂಬು  ಅಷ್ಟೇ!
*ಬದುಕು ಜಟಕಾ ಬಂಡಿ ಎನ್ನುವ ಈ ಮಂದಿ ರಾಕೆಟ್ ವೇಗದಲ್ಲಿ ಸಾಗಿದ್ದರಲ್ಲ?
     "ಜೆಟ್ ಕಾ ಬಂಡಿ " ಎಂದು ಬದಲಾಯಿಸಿ.
* ತಾಯಿಗಿಂತ ದೇವರಿಲ್ಲ, ಹೆಂಡತಿಗಿಂತ?
    ಬಾಯಿ ಇಲ್ಲಾ .
*ಮದುವೆಯಾದ ಪ್ರತಿ ಗಂಡು ತನ್ನಲ್ಲೇ ಆಗಾಗ ಹೇಳಿಕೊಳ್ಳುವ, ಅಂದು ಕೊಳ್ಳುವ ಮಾತು ಯಾವುದು?
    ಬೇಡರ ಕಣ್ಣಪ್ಪ ಚಿತ್ರದ ಹಾಡು " ಶಿವಪ್ಪ ಕಾಯೋ ತಂದೆ !"
* ಬೆಳಕು ಸೆಕೆಂಡಿಗೆ ಒಂದು ಲಕ್ಷ ಎಂಬತ್ತಾರು ಮೈಲಿ ಚಲಿಸುತ್ತದೆ. ಈ ವೇಗ ಏನು ಹೇಳುತ್ತದೆ?
     ಆಕಾಶ " ಅಪ್ " ನಲ್ಲಿದೆ. ಭೂಮಿ " ಡೌನ್" ನಲ್ಲಿದೆ . ಅದಕ್ಕೆ ಸ್ಪೀಡ್ ಜಾಸ್ತಿ.
* ಹೆಂಡತಿ ಮನೆಯೊಳಗಿದ್ದರೆ ನನಗದು ಕೋಟಿ  ರುಪಾಯಿ,  ಗಂಡ ಮನೆಯೊಳಗಿದ್ದರೆ?
     ಸಿಕ್ಕಿಹ ಬಡಪಾಯಿ!!
* ನೀವು ದೇವರನ್ನು ನೋಡಿದ್ದಿರಾ? 
     ನೋಡಿದ್ದೇನೆ! ಕ್ಯಾಲೆಂಡರಿನಲ್ಲಿ !!
* ಹೆಂಡತಿಯ ಮಾತನ್ನು ಕೇಳದಿದ್ದರೆ ಗಂಡನ ಕಥೆ ಏನಾಗುತ್ತದೆ? 
     ಕಥೆ?  ಉಹುಂ ! ಕಾದಂಬರಿ ಆಗುತ್ತೆ!
* ರಾಮನು ಮರದ ಕೆಳಗೆ ಇದ್ದ.  ಇದು ಯಾವ ಕಾಲವಾಗುತ್ತದೆ?
     ರಾಮಾಯಣದ ಕಾಲ 
* ಹೆಂಗಸರ ಮನಸನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ ಅಲ್ಲವೇ?
     ತುಂಬಾ ಕಷ್ಟ ಏನಿಲ್ಲ. ನೀವು ಅರ್ಥ ಮಾಡಿಕೊಳ್ಳುವಷ್ಟರಲ್ಲೇ ಆಕೆ ಮನಸನ್ನೇ ಬದಲಾಯಿಸಿರುತ್ತಾಳೆ , ಅಷ್ಟೇ!

 

 

 

 
 
 
 
 

Comments