ತಾಗುವಾ ಮುನ್ನವೇ ಬಾಗುವ ತಲೆ ಲೇಸು
ಬರಹ
ತಾಗುವಾ ಮುನ್ನವೇ ಬಾಗುವ ತಲೆ ಲೇಸು
ತಾಗಿ ತಲೆಯೊಡೆದು ಕೆಲನಾದ ಬಳಿಕ್ಕದರ ಭೋಗವೇನೆಂದ ಸರ್ವಜ್ಞ
ನೀವು ಗುಡಿಗಳ ಬಾಗಿಲುಗಳನ್ನು ಗಮನಿಸಿದ್ದೀರಾ? ನಮ್ಮಲ್ಲಿ ಹೆಣ್ಣುದೇವತೆಗಳ ಗುಡಿಯ ಬಾಗಿಲು ಸಾಮಾನ್ಯ ಮನುಷ್ಯನ ಎತ್ತರಕ್ಕಿಂತ ಕಡಿಮೆಯಿರುತ್ತದೆ. ಮಾತೃಸ್ವರೂಪಿ ಹೆಣ್ಣಿನ ಮುಂದೆ ಎಲ್ಲರೂ ತಲೆಬಾಗಬೇಕೆನ್ನುವುದು ಇದರರ್ಥ ಇರಬಹುದೇನೋ? ಹಿಂದಿನ ಕಾಲದ ನಮ್ಮ ಮನೆಗಳ ಬಾಗಿಲುಗಳೂ ಹಾಗೆಯೇ ಇತ್ತಲ್ಲವೇ? ಆದರೆ ಈಗ ಕಾಲ ಬದಲಾಗಿದೆ. ಬಂದವನು ನಮಗೆ ಬಾಗದಿರಲಿ ಏಕೆಂದರೆ ನಮ್ಮ ಮನೆಗೆ ಬರುವವನು ನಮ್ಮ ಮಿತ್ರ, ಇಲ್ಲವೇ ನಮ್ಮ ಸಮಾನ ಎಂದು ನಾವು ಭಾವಿಸುತ್ತೇವಾದ್ದರಿಂದ ಈಗ ಬಾಗಿಲುಗಳು ಎತ್ತರಗೊಂಡಿವೆ. ಹಾಗೆಂದು ನಾವೇ ಆದರೂ ತಲೆ ಎತ್ತರಿಸಿ ಅಹಂಕಾರದಿಂದ ನಡೆದರೆ ತಲೆಗೆ ಪೆಟ್ಟಾದೀತು. ಅದನ್ನೇ ಸರ್ವಜ್ಞ ಬಲು ಅರ್ಥಗರ್ಭಿತವಾಗಿ ಹೇಳಿದ್ದಾನೆ. ಅಂದರೆ ಆತ ಹೇಳಿದಂತೆ ತಾಗಿ ತಲೆಯೊಡೆಯುವ ಮುನ್ನ ಬಾಗುವ ತಲೆ ಉಳಿದೀತು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ತಾಗುವಾ ಮುನ್ನವೇ ಬಾಗುವ ತಲೆ ಲೇಸು